ಉತ್ತರಾಖಂಡದ ತೆಹ್ರಿ ಜಿಲ್ಲೆಯಲ್ಲಿ ಸೋಮವಾರ ಸುಮಾರು 18 ಮಂದಿ ಪ್ರಯಾಣಿಕರಿದ್ದ ಬಸ್ಸು 70 ಮೀಟರ್ ಆಳದ ಕಮರಿಗೆ ಉರುಳಿದ ಪರಿಣಾಮ ಐವರು ಮೃತಪಟ್ಟು, 13 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ನರೇಂದ್ರನಗರ ಪ್ರದೇಶದ ಕುಂಜಾಪುರಿ-ಹಿಂಡೋಲಾಖಲ್ ಬಳಿ ಅಪಘಾತ ಸಂಭವಿಸಿದೆ.
ಸೋಮವಾರ ಮಧ್ಯಾಹ್ನ ಅಪಘಾತದ ಬಗ್ಗೆ ಜಿಲ್ಲಾ ನಿಯಂತ್ರಣ ಕೊಠಡಿ ಎಸ್‌ಡಿಆರ್‌ಎಫ್ ಕಾರ್ಪ್ಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್) ಅಧಿಕಾರಿಗಳು ತಿಳಿಸಿದ್ದಾರೆ.
ಎಸ್‌ಡಿಆರ್‌ಎಫ್ ಅಧಿಕಾರಿಗಳ ಪ್ರಕಾರ, ಆರಂಭದಲ್ಲಿ ಸುಮಾರು 30 ರಿಂದ 35 ಜನರನ್ನು ಹೊತ್ತೊಯ್ಯುತ್ತಿದ್ದ ಬಸ್ ನರೇಂದ್ರನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಸ್ತೆಯಿಂದ ಸ್ಕಿಡ್ ಆಗಿ ಕಮರಿಗೆ ಬಿದ್ದಿದೆ.