Select Your Language

Notifications

webdunia
webdunia
webdunia
webdunia

ಕಾರ್ಗಿಲ್ ಯುದ್ಧದಲ್ಲಿ ಸ್ಫೋಟಗೊಳ್ಳದ ಬಾಂಬ್ 24 ವರ್ಷದ ಬಳಿಕ ಬ್ಲ್ಯಾಸ್ಟ್

ಕಾರ್ಗಿಲ್ ಯುದ್ಧದಲ್ಲಿ ಸ್ಫೋಟಗೊಳ್ಳದ ಬಾಂಬ್ 24 ವರ್ಷದ ಬಳಿಕ ಬ್ಲ್ಯಾಸ್ಟ್
ಶ್ರೀನಗರ , ಮಂಗಳವಾರ, 18 ಏಪ್ರಿಲ್ 2023 (12:24 IST)
ಶ್ರೀನಗರ : 1999ರ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಸ್ಫೋಟಗೊಂಡಿರದ ಬಾಂಬ್ ಒಂದು ಇತ್ತೀಚೆಗೆ ಸ್ಫೋಟಗೊಂಡ ಪರಿಣಾಮ ಓರ್ವ ಬಾಲಕ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡ ಘಟನೆ ಲಡಾಖ್ನ ಕುರ್ಬಥಾಂಗ್ನ ಫುಟ್ಬಾಲ್ ಮೈದಾನ ಒಂದರಲ್ಲಿ ನಡೆದಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
 
ಪಾಶ್ಕುಮ್ನ ಖಾರ್ಜಾಂಗ್ನ ನಿವಾಸಿಗಳಾದ ಅಲಿ ನಕಿ, ಮುಂತಜೀರ್ ಮೆಹದಿ ಮತ್ತು ಬಾಕಿರ್ ಎಂಬ ಮೂರು ಬಾಲಕರು ಫುಟ್ಬಾಲ್ ಮೈದಾನಕ್ಕೆ ಹೋಗುತ್ತಿದ್ದರು. ಆ ವೇಳೆ ಓರ್ವ ಬಾಲಕ ಬಾಂಬ್ ಮೇಲೆ ಎಡವಿ ಬಿದ್ದಿದ್ದಾನೆ. ಪರಿಣಾಮ ಬಾಂಬ್ ಸ್ಪೋಟಗೊಂಡು ಬಾಕಿರ್ ಮೃತಪಟ್ಟಿದ್ದಾನೆ. ಇನ್ನುಳಿದ ಇಬ್ಬರು ಬಾಲಕರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಾಶ್ಕುಮ್ನ ಕೌನ್ಸಿಲರ್ ಕಚೋ ಮೊಹಮ್ಮದ್ ಫಿರೋಜ್ ಹೇಳಿದ್ದಾರೆ. 

ಗಾಯಗೊಂಡಿರುವ ಮಕ್ಕಳಲ್ಲಿ ಒಬ್ಬ ಅಪಾಯದಿಂದ ಪಾರಾಗಿದ್ದು, ಇನ್ನೊಬ್ಬ ಬದುಕುಳಿಯುವ ಸಾಧ್ಯತೆ ಇದೆ. ಮೃತನ ಕುಟುಂಬಕ್ಕೆ 4 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ 1 ಲಕ್ಷ ರೂ. ಪರಿಹಾರ ನೀಡಲಾಗುವುದು. ಹಾಗೂ ಕಾರ್ಗಿಲ್ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಮದ್ದುಗುಂಡುಗಳನ್ನು ಶೀಘ್ರದಲ್ಲಿ ಬೇರೆಡೆ ಸ್ಥಳಾಂತರಿಸುತ್ತೇವೆ ಎಂದು ಲಡಾಖ್ನ ಲೆಫ್ಟಿನೆಂಟ್ ಗವರ್ನರ್ ಬಿ.ಡಿ ಮಿಶ್ರಾ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಂಡ್ಯದಿಂದ ನಾನು ಸ್ಪರ್ಧೆ ಮಾಡಲ್ಲ : ಕುಮಾರಸ್ವಾಮಿ