Select Your Language

Notifications

webdunia
webdunia
webdunia
webdunia

ಮದರಸಾದಲ್ಲಿ ಬಾಂಬ್ ಸ್ಫೋಟ ! 19 ಸಾವು, 24 ಮಂದಿಗೆ ಗಾಯ

webdunia
ಕಾಬೂಲ್ , ಗುರುವಾರ, 1 ಡಿಸೆಂಬರ್ 2022 (09:24 IST)
ಕಾಬೂಲ್ : ಅಫ್ಘಾನಿಸ್ತಾನದ ಉತ್ತರ ನಗರವಾದ ಐಬಕ್ನಲ್ಲಿರುವ ಮದರಸಾದಲ್ಲಿ ಬುಧವಾರ ಸ್ಫೋಟ ಉಂಟಾಗಿದ್ದು, ಘಟನೆಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ 19 ಜನರು ಸಾವನ್ನಪ್ಪಿದ್ದಾರೆ ಮತ್ತು 24 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಕಳೆದ ವರ್ಷ ಆಗಸ್ಟ್ನಲ್ಲಿ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಅಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡು ಸಾಕಷ್ಟು ಬಾರಿ ಸ್ಫೋಟಗಳು ಹಾಗೂ ದಾಳಿಗಳನ್ನು ನಡೆಸಲಾಗಿದೆ.

ನಿನ್ನೆ ರಾಜಧಾನಿ ಕಾಬೂಲ್ನ ಉತ್ತರಕ್ಕೆ ಸುಮಾರು 200 ಕಿ.ಮೀ (130 ಮೈಲು) ದೂರದಲ್ಲಿರುವ ಐಬಕ್ನಲ್ಲಿರುವ ಮದರಸಾದಲ್ಲಿ ಬಾಂಬ್ ಸ್ಫೋಟಗೊಂಡಿದೆ. ಮೃತರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು ಎಂದು ಮೂಲಗಳು ತಿಳಿಸಿವೆ. 


Share this Story:

Follow Webdunia kannada

ಮುಂದಿನ ಸುದ್ದಿ

ಪಿಎಫ್ಐ ಬ್ಯಾನ್ : ಕೇಂದ್ರದ ಆದೇಶ ಪ್ರಶ್ನಿಸಿದ್ದ ಅರ್ಜಿ ವಜಾ?