Select Your Language

Notifications

webdunia
webdunia
webdunia
webdunia

ಮಂಡ್ಯದಿಂದ ನಾನು ಸ್ಪರ್ಧೆ ಮಾಡಲ್ಲ : ಕುಮಾರಸ್ವಾಮಿ

ಮಂಡ್ಯದಿಂದ ನಾನು ಸ್ಪರ್ಧೆ ಮಾಡಲ್ಲ : ಕುಮಾರಸ್ವಾಮಿ
ಬೆಂಗಳೂರು , ಮಂಗಳವಾರ, 18 ಏಪ್ರಿಲ್ 2023 (12:08 IST)
ಬೆಂಗಳೂರು : ಮಂಡ್ಯದಿಂದ ನಾನು ಸ್ಪರ್ಧೆ ಮಾಡಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.
 
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ ಬಿಟ್ಟು ಬೇರೆಲ್ಲೂ ನಾನು ಸ್ಪರ್ಧೆ ಮಾಡಲ್ಲ. ಮಂಡ್ಯದಲ್ಲಿ ಈಗಾಗಲೇ ಪ್ರಬಲ ಅಭ್ಯರ್ಥಿಗಳು ಇದ್ದಾರೆ. ಈ ಹಿನ್ನೆಲೆಯಲ್ಲಿ ಮಂಡ್ಯದಿಂದ ನಾನು ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕಾರ್ಯಕರ್ತರ ಒತ್ತಡ ಇರುವುದು ನಿಜ. ಆದರೆ ಮಂಡ್ಯದಿಂದ ನಾನು ಸ್ಪರ್ಧೆ ಮಾಡುವುದಕ್ಕೆ ಆಗಲ್ಲ. ನಾನು ಚನ್ನಪಟ್ಟಣದಿಂದ ಮಾತ್ರ ಸ್ಪರ್ಧೆ ಮಾಡುತ್ತಿದ್ದೇನೆ. ಚನ್ನಪಟ್ಟಣ ಬಿಟ್ಟು ಬೇರೆಲ್ಲೂ ನಾನು ಹೋಗಲ್ಲ. ಮಂಡ್ಯದಲ್ಲಿ ಅಭ್ಯರ್ಥಿಗಳು ಇದ್ದಾರೆ. ಈ ಬಗ್ಗೆ ಕೂತು ತೀರ್ಮಾನ ಮಾಡುತ್ತೇವೆ. ನಾಳೆ ಮೂರನೇ ಪಟ್ಟಿ ಬಿಡುಗಡೆ ಆಗಲಿದೆ ಎಂದು ಹೇಳಿದರು. 


Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ಮೊದಲ ಆ್ಯಪಲ್ ಸ್ಟೋರ್ ಮುಂಬೈನಲ್ಲಿ ಉದ್ಘಾಟನೆ