Select Your Language

Notifications

webdunia
webdunia
webdunia
webdunia

ದೆಹಲಿಯಲ್ಲಿ ಬದಲಾಗದ ಗಾಳಿಯ ಗುಣಮಟ್ಟ

ದೆಹಲಿಯಲ್ಲಿ ಬದಲಾಗದ ಗಾಳಿಯ ಗುಣಮಟ್ಟ
ದೆಹಲಿ , ಸೋಮವಾರ, 27 ನವೆಂಬರ್ 2023 (18:43 IST)
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾಲಿನ್ಯ ಪ್ರಮಾಣ ದಿನ ದಿನಕ್ಕೂ ಹೆಚ್ಚಾಗುತ್ತಲೇ ಇದೆ. ಇಂದು ಬೆಳಗ್ಗೆ 6 ಗಂಟೆಯ ವೇಳೆಯಲ್ಲಿ ದೆಹಲಿಯನ್ನು ದಟ್ಟ ಹೊಗೆ ಆವರಿಸಿತ್ತು. ನೂರು ಮೀಟರ್ ದೂರದವರೆಗೂ ದೃಷ್ಟಿಗೋಚರವಿರಲಿಲ್ಲ.

ನಸುಕಿನಲ್ಲೂ 400ರಷ್ಟು ಏರ್ ಕ್ವಾಲಿಟಿ ಇಂಡೆಕ್ಸ್​ ದಾಖಲಾಗಿದೆ. ಬೆಳಗ್ಗೆ 7 ಗಂಟೆಯ ವೇಳೆಯಲ್ಲಿ ಒಟ್ಟಾರೆ ದೆಹಲಿಯ ಏರ್ ಇಂಡೆಕ್ಸ್​ ಕ್ವಾಲಿಟಿ 400ರಷ್ಟು ದಾಖಲಾಗಿದೆ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ. ನಿನ್ನೆ ಸಂಜೆ 4 ಗಂಟೆಯ ವೇಳೆಯಲ್ಲಿ 396ರಷ್ಟು ಏರ್ ಕ್ವಾಲಿಟಿ ಇಂಡೆಕ್ಸ್ ದಾಖಲಾಗಿತ್ತು. ಇಂದು ದೆಹಲಿಯ ಕೆಲವು ಬಡಾವಣೆಗಳಲ್ಲಿ 370ಕ್ಕಿಂತ ಹೆಚ್ಚು ಏರ್ ಕ್ವಾಲಿಟಿ ಇಂಡೆಕ್ಸ್​ ದಾಖಲಾಗಿದ್ದರೆ, ಇನ್ನು ಕೆಲವು ಬಡಾವಣೆಗಳಲ್ಲ ಸ್ವಲ್ಪ ಕಡಿಮೆ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿಖಿಲ್-BYV ಸಹೋದರರಂತೆ ಓಡಾಡಲಿದ್ದಾರೆ