Select Your Language

Notifications

webdunia
webdunia
webdunia
webdunia

ಮಹಾ ರಾಜಕೀಯ ಬಿಕ್ಕಟ್ಟು; ಅಖಾಡಕ್ಕಿಳಿದ ಸಿಎಂ ಉದ್ದವ್ ಪತ್ನಿ !

Uddhav thakrey Rashmi Maharashtra ಮಹಾರಾಷ್ಟ್ರ ಉದ್ದವ್‌ ಠಾಕ್ರೆ ರಶ್ಮಿ ಠಾಕ್ರೆ
bengaluru , ಭಾನುವಾರ, 26 ಜೂನ್ 2022 (14:29 IST)

ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದ್ದು ಬಂಡಾಯ ಶಾಸಕರನ್ನು ಮನವೊಲಿಸುವಲ್ಲಿ ನಾಯಕರು ವಿಫಲರಾಗಿರುವ ಹಿನ್ನೆಲೆಯಲ್ಲಿ ಇದೀಗ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಪತ್ನಿ ರಶ್ಮಿ ಠಾಕ್ರೆ ಅಖಾಡಕ್ಕಿಳಿದಿದ್ದಾರೆ.

ಮಹಾ ವಿಕಾಶ್ ಅಘಾಡಿ ಮೈತ್ರಿ ಸರ್ಕಾರದ ವಿರುದ್ದ ಬಂಡಾಯವೆದ್ದಿದ್ದು. ಅಸ್ಸಾಮಿನ ಗುವಾಹಟಿಯ ಐಷಾರಾಮಿ ಹೋಟೆಲ್‌ ನಲ್ಲಿ ತಂಗಿರುವ ಶಾಸಕರ ಪತ್ನಿಯರಿಗೆ ಕರೆ ಮಾಡಿರುವ ರಶ್ಮಿ ಅವರ ಮನವೊಲಿಕೆಗೆ ಪ್ರಯತ್ನ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.

ಶನಿವಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಉದ್ದವ್ ಠಾಕ್ರೆ ಬಾಳಾ ಸಾಹೇಬ್ ಹಾಗೂ ಪಕ್ಷದ ಹೆಸರನ್ನು ಬಳಸದಂತೆ ಚುನಾವಣೆ ಎದುರಿಸುವಂತೆ ಬಹಿರಂಗ ಸವಾಲೆಸೆದಿದ್ದರು. ಈ ಮಧ್ಯೆ ರೆಬೆಲ್ ನಾಯಕರು ತಮ್ಮ ಹೋಟಲ್ ಬುಕ್ಕಿಂಗ್ ಅನ್ನು ಇನ್ನೆರಡು ದಿನ ವಿಸ್ತರಿಸುವಂತೆ ಆಡಳಿತ ಮಂಡಳಿಗೆ ಪತ್ರ ಬರೆದಿರುವುದಾಗಿ ತಿಳಿದು ಬಂದಿದೆ.‌


Share this Story:

Follow Webdunia kannada

ಮುಂದಿನ ಸುದ್ದಿ

ಇಮ್ರಾನ್ ವಿರುದ್ಧ ಬೇಹುಗಾರಿಕೆಗೆ ಪ್ರಯತ್ನಿಸಿದ ! ಮುಂದೇನಾಯ್ತು?