Select Your Language

Notifications

webdunia
webdunia
webdunia
webdunia

ಇಮ್ರಾನ್ ವಿರುದ್ಧ ಬೇಹುಗಾರಿಕೆಗೆ ಪ್ರಯತ್ನಿಸಿದ ! ಮುಂದೇನಾಯ್ತು?

ಇಮ್ರಾನ್ ವಿರುದ್ಧ ಬೇಹುಗಾರಿಕೆಗೆ ಪ್ರಯತ್ನಿಸಿದ ! ಮುಂದೇನಾಯ್ತು?
ಇಸ್ಲಾಮಾಬಾದ್ , ಭಾನುವಾರ, 26 ಜೂನ್ 2022 (14:23 IST)
ಇಸ್ಲಾಮಾಬಾದ್ : ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲೆ ಬೇಹುಗಾರಿಕೆಗೆ ಪ್ರಯತ್ನಿಸಿದ ಸಿಬ್ಬಂದಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇಮ್ರಾನ್ ಖಾನ್ ನಿವಾಸದಲ್ಲಿ ಉದ್ಯೋಗಿಯೊಬ್ಬ ಗೂಢಾಚಾರಿಕೆ ಸಾಧನವನ್ನು ಅಳವಡಿಸಲು ಪ್ರಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ.

ಮಾಜಿ ಪ್ರಧಾನಿ ಮಲಗುವ ಕೋಣೆಯಲ್ಲಿ ಗೂಢಾಚಾರಿಕೆ ಸಾಧನವನ್ನು ಅಳವಡಿಸಲು ಉದ್ಯೋಗಿಯೊಬ್ಬರಿಗೆ ಹಣ ನೀಡಲಾಗಿದೆ ಎನ್ನಲಾಗಿದ್ದು, ಈ ಬಗ್ಗೆ ತಿಳಿದ ಇನ್ನೊಬ್ಬ ಉದ್ಯೋಗಿ ಗೂಢಾಚಾರಿಕೆ ಬಗ್ಗೆ ಭದ್ರತಾ ತಂಡಕ್ಕೆ ತಿಳಿಸಿದ್ದಾನೆ. ಈ ಮೂಲಕ ಬೇಹುಗಾರಿಕೆ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ. 

ಪಾಕಿಸ್ತಾನ್ ತೆಹ್ರಿಕ್-ಎ-ಇನ್ಸಾಫ್(ಪಿಟಿಐ) ಅಧ್ಯಕ್ಷನನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿದೆ ಎಂಬ ವದಂತಿಯ ಮಧ್ಯೆಯೇ ಈ ಘಟನೆ ನಡೆದಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಸಮಗ್ರ ಅಭಿವೃದ್ಧಿಗೆ ಭೂಸ್ವಾಧೀನ : ಸಿಎಂ