Publish Date: Sun, 26 Jun 2022 (09:30 IST)
Updated Date: Sun, 26 Jun 2022 (09:40 IST)
ಪಾಟ್ನಾ: ಹೊಸದಾಗಿ ಮದುವೆಯಾಗಿದ್ದ ಯುವತಿ ಗಂಡನ ಜೊತೆ ಸುತ್ತಾಡಲು ಬಂದವಳು ಪ್ರಿಯಕರನ ಜೊತೆ ಎಸ್ಕೇಪ್ ಆಗಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಬಳೆ ಕೊಡಿಸಬೇಕೆಂದು ಯುವತಿ ಗಂಡನನ್ನು ಉಪಾಯವಾಗಿ ನಗರಕ್ಕೆ ಕರೆದುಕೊಂಡ ಹೋಗಿದ್ದಳು. ಈ ವೇಳೆ ಕಾರ್ ನಲ್ಲಿ ಬಂದ ಪ್ರಿಯಕರ ಗಂಡನಿಗೆ ಗನ್ ತೋರಿಸಿ ಯುವತಿ ಜೊತೆ ಎಸ್ಕೇಪ್ ಆಗಿದ್ದಾನೆ.
ಗಾಬರಿಯಾದ ಗಂಡ ಪೊಲೀಸರಿಗೆ ದೂರು ನೀಡಿದ್ದಾನೆ. ಮನೆಗೆ ಬಂದು ಪರಿಶೀಲಿಸಿದಾಗ ಮನೆಯಲ್ಲಿ ಚಿನ್ನಾಭರಣಗಳೂ ನಾಪತ್ತೆಯಾಗಿದ್ದವು. ಯುವತಿಯ ಮೊಬೈಲ್ ಪರಿಶೀಲಿಸಿದಾಗ ಹಲವು ಬಾರಿ ಪ್ರಿಯಕರನಿಗೆ ಕರೆ ಮಾಡಿರುವುದು ಗೊತ್ತಾಗಿದೆ. ಹೀಗಾಗಿ ಇಬ್ಬರೂ ಪ್ಲ್ಯಾನ್ ಮಾಡಿ ಎಸ್ಕೇಪ್ ಆಗಿರುವುದು ಬಯಲಾಗಿದೆ. ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.