Publish Date: Sat, 25 Jun 2022 (08:50 IST)
Updated Date: Sat, 25 Jun 2022 (09:03 IST)
ಪಾಟ್ನಾ: ಹೆತ್ತಮ್ಮನ ಜೊತೆ ಪ್ರಣಯದಾಟವಾಡುತ್ತಿದ್ದ ವ್ಯಕ್ತಿಯನ್ನು ಮಗ ತನ್ನ ಸಹಚರರೊಂದಿಗೆ ಸೇರಿಕೊಂಡು ಕೊಲೆ ಮಾಡಿದ ಘಟನೆ ನಡೆದಿದೆ.
ಕೊಲೆಗೀಡಾದ ವ್ಯಕ್ತಿಗೆ ಹಲವು ಮಹಿಳೆಯರೊಂದಿಗೆ ಅಕ್ರಮ ಸಂಬಂಧವಿತ್ತು. ತನ್ನ ತಾಯಿಯೊಂದಿಗೆ ಚೆಲ್ಲಾಟ ಬಿಡುವಂತೆ ಮಗ ಈ ಮೊದಲು ಎಚ್ಚರಿಕೆ ನೀಡಿದ್ದ. ಆದರೂ ಸಂತ್ರಸ್ತ ಪ್ರಣಯದಾಟ ಮುಂದುವರಿಸಿದ್ದ. ಈ ಬಾರಿ ತಾಯಿ ಜೊತೆ ರತಿಕ್ರೀಡೆಯಾಡುವಾಗ ರೆಡ್ ಹ್ಯಾಂಡ್ ಆಗಿ ಮಗನ ಕೈಗೆ ಸಿಕ್ಕಿಬಿದ್ದಿದ್ದ.
ಹೀಗಾಗಿ ಮಗ ತನ್ನಿಬ್ಬರು ಸ್ನೇಹಿತರ ಸಹಾಯದೊಂದಿಗೆ ವ್ಯಕ್ತಿಯನ್ನು ಕೊಲೆ ಮಾಡಿ ಮೃತದೇಹವನ್ನು ರೈಲ್ವೇ ಟ್ರ್ಯಾಕ್ ಮೇಲೆ ಎಸೆದಿದ್ದ. ಇದೀಗ ವಿಚಾರಣೆ ನಡೆಸಿದ ಪೊಲೀಸರಿಗೆ ನಿಜ ಗೊತ್ತಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.