Select Your Language

Notifications

webdunia
webdunia
webdunia
webdunia

ಗ್ರಾ.ಪಂ. ಅಧ್ಯಕ್ಷೆಯ ದರ್ಪ: ಕಾರ್ಯವೈಖರಿ ಪ್ರಶ್ನಿಸಿದ ಗ್ರಾಮಸ್ಥರ ಮೇಲೆ ಚಪ್ಪಲಿಯಿಂದ ಹಲ್ಲೆ!

grama panchayat president chappal ಚಪ್ಪಲಿ ರಾಯಚೂರು ಗ್ರಾಪಂ ಅಧ್ಯಕ್ಷೆ
bengaluru , ಗುರುವಾರ, 23 ಜೂನ್ 2022 (14:38 IST)

ಕಾರ್ಯ ವೈಖರಿಯನ್ನು ಪ್ರಶ್ನೆ ಮಾಡಿದ ಗ್ರಾಮಸ್ಥರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಲ್ಲೆ ಮಾಡಿ ದರ್ಪ ತೋರಿದ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ತೋರಣದಿನ್ನಿಯಲ್ಲಿ ನಡೆದಿದೆ.

ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದಮ್ಮ ಕಚೇರಿ ಹೊರಗಡೆಯೇ ಚಪ್ಪಲಿ ಹಿಡಿದು ಗ್ರಾಮಸ್ಥ ಬಸವರಾಜ್‌ ಅವರ ಕಾಲರ್‌ ಹಿಡಿದು ಹಲ್ಲೆ ಮಾಡಿದ್ದಾರೆ.

ಗ್ರಾಮದ ಕಸ ವಿಲೆವಾರಿ ವಾಹನದ ಚಾಲಕ ತಮ್ಮ ಸಂಬಂಧಿಯನ್ನೇ ಚಂದಮ್ಮ ಅನಧಿಕೃತವಾಗಿ ನೇಮಿಸಿಕೊಂಡಿದ್ದಕ್ಕೆ ಗ್ರಾಮಸ್ಥರು ಪ್ರಶ್ನಿಸಿದ್ದರು. ಇದಕ್ಕೆ ಸಿಟ್ಟಾದ ಅಧ್ಯಕ್ಷೆ ಚಂದಮ್ಮ ಗ್ರಾಮ ಪಂಚಾಯತಿ ಕಚೇರಿ ಹೊರಗಡೆಯೇ ಚಪ್ಪಲಿ ಹಿಡಿದು ಜಗಳ ಮಾಡಿದ್ದಾರೆ. ಪ್ರಶ್ನೆ ಮಾಡಿದ ಬಸವರಾಜ್ ಅವರ ಕಾಲರ್ ಹಿಡಿದು ದರ್ಪ ಮೆರೆದಿದ್ದಾರೆ.

ಗ್ರಾಮ ಪಂಚಾಯಿತಿ ಅಧ್ಯಕ್ಷರು ಪತಿಯೊಂದಿಗೆ ಸೇರಿ ಸಾರ್ವಜನಿಕರ ಮೇಲೆ ಅಧಿಕಾರ ದರ್ಪ ತೋರಿಸುತ್ತಿದ್ದಾರೆ. ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಅಂತ ಇದೀಗ ಗ್ರಾಮಸ್ಥರು ಆರೋಪಿಸಿ ಗ್ರಾಮ ಪಂಚಾಯತಿ ಕಚೇರಿ ಮುಂದೆ ಪ್ರತಿಭಟನೆ ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

91ನೇ ವಯಸ್ಸಿಗೆ 4ನೇ ಪತ್ನಿಗೆ ಡಿವೋರ್ಸ್‌ ನೀಡಿದ ಪತ್ರಿಕೋದ್ಯಮಿ!