Publish Date: Thu, 24 Mar 2022 (08:50 IST)
Updated Date: Thu, 24 Mar 2022 (09:03 IST)
ಕಾನ್ಪುರ: 14 ವರ್ಷದ ಅಪ್ರಾಪ್ತ ಯುವತಿಯನ್ನು ಅಪಹರಿಸಿದ ಇಬ್ಬರು ಸಹೋದರರು ಆಕೆಯನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ.
ಈ ಸಂಬಂಧ ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ. ಮನೆಯ ಹೊರಗೆ ಪ್ರಾಣಿಗಳಿಗೆ ಮೇವು ಹಾಕುತ್ತಿದ್ದಾಗ ಯುವತಿಯನ್ನು ಅಪಹರಿಸಲಾಗಿತ್ತು. ಬಳಿಕ ಅತ್ಯಾಚಾರವೆಸಗಲಾಗಿದೆ.
ಯುವತಿ ಎಷ್ಟು ಹೊತ್ತಾದರೂ ಮನೆಗೆ ಬಾರದೇ ಇದ್ದಾಗ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಅರೆಪ್ರಜ್ಞಾವಸ್ಥೆಯಲ್ಲಿ ಯುವತಿ ಪೊದೆಯೊಂದರ ಬಳಿ ಪತ್ತೆಯಾಗಿದ್ದಳು. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.