Publish Date: Sat, 03 Oct 2020 (16:04 IST)
Updated Date: Sat, 03 Oct 2020 (16:07 IST)
ಸೋಶಿಯಲ್ ಮೀಡಿಯಾದಲ್ಲಿ ಈಗೇನಿದ್ದರೂ ಕಪಲ್ ಚಾಲೆಂಜ್ ಟ್ರೆಂಡ್ ಜೋರಾಗಿದೆ. ಆದರೆ ಇದರಿಂದ ಅನಾಹುತ ಕಾದಿದೆಯಂತೆ.
ಸಾಮಾಜಿಕ ಜಾಲತಾಣಗಳಲ್ಲಿ ನಮ್ದೂ ಒಂದ್ ಇರಲಿ ಎಂದು ದಂಪತಿ ತಮ್ಮ ಫೋಟೊಗಳಿಗೆ ಕಪಲ್ ಚಾಲೆಂಜ್ ಹೆಸರು ಹಾಕಿ ಪೋಸ್ಟ್ ಮಾಡುತ್ತಿದ್ದಾರೆ.
ಆದರೆ ಕಪಲ್ ಚಾಲೆಂಜ್ ನಲ್ಲಿ ಫೋಟೋ ಹಾಕಿರೋರು ತುಂಬಾ ಹುಷಾರಾಗಿರಬೇಕಾಗಿದೆ. ಏಕೆಂದರೆ ಇವರ ವಯಕ್ತಿಕ ಮಾಹಿತಿ ಸೋರಿಕೆ ಆಗುತ್ತಿವೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಕಪಲ್ ಚಾಲೆಂಜ್ ನಲ್ಲಿ ದಂಪತಿಯ ಫೋಟೋಗಳನ್ನು ಪಡೆದುಕೊಳ್ಳುವ ಹ್ಯಾಕರ್, ಸೈಬರ್ ಹ್ಯಾಕರ್ ಗಳು ವಯಕ್ತಿಕ ಮಾಹಿತಿಗಳನ್ನು ಕದಿಯುತ್ತಿರುವ ಪ್ರಕರಣಗಳು ವಿದೇಶಗಳಲ್ಲಿ ಹೆಚ್ಚಾಗುತ್ತಿವೆ. ಹೀಗಾಗಿ ಚಾಲೆಂಜ್ ಎಂದು ಫೋಟೊ ಹಾಕೋದಕ್ಕೂ ಮೊದಲು ಇರಲಿ ಕೊಂಚ ಎಚ್ಚರ.