Publish Date: Sat, 03 Oct 2020 (15:53 IST)
Updated Date: Sat, 03 Oct 2020 (15:56 IST)
ಬಿಜೆಪಿ ಸಂಸದ ಹಾಗೂ ಕೇಂದ್ರ ಸಚಿವ ದಿ.ಸುರೇಶ್ ಅಂಗಡಿ ಮೃತದೇಹ ಕುರಿತು ರಾಜಕೀಯ ಜಟಾಪಟಿ ಆರಂಭಗೊಂಡಿದೆ.
ಬೆಳಗಾವಿಗೆ ಕೇಂದ್ರ ಸಚಿವ ಸುರೇಶ್ ಅಂಗಡಿಯವರ ಮೃತದೇಹವನ್ನು ಏಕೆ ತರಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನೆ ಮಾಡಿದ್ದರು.
ಡಿಕೆಶಿ ಹೇಳಿಕೆಗೆ ಸಚಿವ ವಿ.ಸೋಮಣ್ಣ ತಿರುಗೇಟು ನೀಡಿದ್ದಾರೆ.
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ನಿಧನಹೊಂದಿದಾಗಲೂ ಅಂತಿಮ ದರ್ಶನಕ್ಕೆ ಜನರಿಗೆ ಅವಕಾಶ ನೀಡಿದ್ದಿಲ್ಲ. ಅದೇ ನಿಯಮವನ್ನು ಸುರೇಶ್ ಅಂಗಡಿ ಅವರ ಸಾವಿನ ವಿಷಯದಲ್ಲಿಯೂ ಪಾಲಿಸಲಾಗಿದೆ. ಕಾನೂನು ಎಲ್ಲರಿಗೂ ಒಂದೇ ಎಂದಿದ್ದಾರೆ.