Select Your Language

Notifications

webdunia
webdunia
webdunia
Tuesday, 15 April 2025
webdunia

ಆರ್.ಆರ್.ನಗರದಲ್ಲಿ ದಿ.ಡಿಕೆ ರವಿ ಪತ್ನಿಗೆ ಕಾಂಗ್ರೆಸ್ ಟಿಕೆಟ್ ನೀಡುವ ಬಗ್ಗೆ ಕೆಪಿಸಿಸಿ ಅಧ್ಯಕ್ಷರು ಹೇಳಿದ್ದೇನು?

ಬೆಳಗಾವಿ
ಬೆಂಗಳೂರು , ಶನಿವಾರ, 3 ಅಕ್ಟೋಬರ್ 2020 (11:11 IST)
ಬೆಂಗಳೂರು : ಆರ್.ಆರ್.ನಗರದಲ್ಲಿ ದಿ.ಡಿಕೆ ರವಿ  ಪತ್ನಿಗೆ ಕಾಂಗ್ರೆಸ್ ಟಿಕೆಟ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಡಿಕೆ ರವಿ ಪತ್ನಿಗೆ ಟಿಕೆಟ್ ನೀಡಲು ಕೆಲವರಿಂದ ಶಿಫಾರಸು ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್ ಅವರು, ಡಿಕೆ ರವಿ ಪತ್ನಿಗೆ ಟಿಕೆಟ್ ನೀಡಲು ಕೆಲ ಹಿರಿಯ ನಾಯಕರು ಶಿಫಾರಸು ಮಾಡಿದ್ದಾರೆ. ಆದರೆ ಅವರ ತಂದೆಯವರೇ ನಮ್ಮ ಪಕ್ಷ ಬಿಟ್ಟು ಹೋಗಿದ್ದರು. ಈಗ ಪಾಪ ಅವರ ಮಗಳದ್ದು ತಪ್ಪು ಏನಿದೆ? ಕೆಲವರು ಸಲಹೆ ನೀಡುತ್ತಾರೆ, ಆದರೆ ನಾವು ಇನ್ನೂ ಚರ್ಚಿಸಿಲ್ಲ.  ಆರ್.ಆರ್.ನಗರ ಕ್ಷೇತ್ರದಲ್ಲಿ 7-8 ಆಕಾಂಕ್ಷಿಗಳು ಇದ್ದಾರೆ. ನಮ್ಮ ಡಿಸಿಸಿ ಪ್ರೆಸಿಡೆಂಟ್ ಸೇರಿದಂತೆ ಹಲವು ಆಕಾಂಕ್ಷಿಗಳಿದ್ದಾರೆ ಎಂದು ತಿಳಿಸಿದ್ದಾರೆ.

ಹಾಗೇ ಮುನಿರತ್ನ ಅವರನ್ನು ಮತ್ತೆ ಕಾಂಗ್ರೆಸ್ ಸೇರಿಸಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷಕ್ಕೆ ಬರಲು ಯಾರು ಬೇಕಾದರೂ ಅರ್ಜಿ ಹಾಕಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಪ್ರಧಾನಿ ಮೋದಿಯಿಂದ ಜಗತ್ತಿನ ಅತಿ ಉದ್ದದ ಅಟಲ್ ಸುರಂಗ ಮಾರ್ಗಕ್ಕೆ ಚಾಲನೆ