ಬೆಂಗಳೂರು: ದಿನಕ್ಕೆ ಎಷ್ಟೇ ಜಿಬಿ ಇಂಟರ್ ನೆಟ್ ಪ್ಲ್ಯಾನ್ ಹಾಕಿಸಿಕೊಂಡರೂ ಬೇಗನೇ ಡಾಟಾ ಖಾಲಿಯಾಗುತ್ತಿದೆ ಎಂದು ಚಿಂತೆಯಾಗುತ್ತಿದೆಯಾ? ಹಾಗಿದ್ದರೆ ಮೊಬೈಲ್ ಡಾಟಾ ಬೇಗನೇ ಮುಗಿಯಲು ಕಾರಣ ಮತ್ತು ಪರಿಹಾರವೇನೆಂದು ನೋಡಿ.
ನಮ್ಮ ಕೈಯಲ್ಲಿರುವ ಮೊಬೈಲ್ ಈಗ ಅವಿಭಾಜ್ಯ ಅಂಗವಾಗಿದೆ. ವ್ಯಾವಹಾರಿಕವಾಗಿ ಎಲ್ಲಾ ವಿಚಾರಗಳಿಗೂ ಮೊಬೈಲ್ ನ್ನು ಅವಲಂಬಿಸಿರುತ್ತೇವೆ. ಹೀಗಾಗಿ ಮೊಬೈಲ್ ನಲ್ಲಿ ಇಂಟರ್ ನೆಟ್ ಬಳಕೆ ಅನಿವಾರ್ಯ.
ಮೊಬೈಲ್ ನಲ್ಲಿ ಸಾಮಾನ್ಯವಾಗಿ ಇನ್ ಬಿಲ್ಟ್ ಆಪ್ ಗಳ ಜೊತೆಗೆ ನಮಗೆ ಬೇಕಾದ ಅನೇಕ ಆಪ್ ಗಳನ್ನು ಡೌನ್ ಲೋಡ್ ಮಾಡಿಕೊಂಡಿರುತ್ತೇವೆ. ಪ್ರತಿನಿತ್ಯ ಸೋಷಿಯಲ್ ಮೀಡಿಯಾಗಳಾದ ಇನ್ ಸ್ಟಾಗ್ರಾಂ, ಯೂ ಟ್ಯೂಬ್, ವ್ಯಾಟ್ಸಪ್, ಫೇಸ್ ಬುಕ್ ನ್ನು ಹೆಚ್ಚಾಗಿ ಬಳಕೆ ಮಾಡುತ್ತೇವೆ.
ಈ ರೀತಿ ಸಾಕಷ್ಟು ಆಪ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳುವುದರಿಂದ ಮತ್ತು ಅದನ್ನು ಹೆಚ್ಚು ಬಳಕೆ ಮಾಡುವುದರಿಂದ ಸಹಜವಾಗಿಯೇ ಇಂಟರ್ ನೆಟ್ ಕೂಡಾ ಹೆಚ್ಚು ಬಳಕೆಯಾಗುತ್ತದೆ. ಇದರ ಜೊತೆಗೆ ನಮಗೆ ಅರಿವೇ ಇಲ್ಲದಂತೆ ಆಪ್ ಗಳನ್ನು ಅಪ್ ಡೇಟ್ ಮಾಡಲು ಅಟೋ ಅಪ್ ಡೇಟ್ ಮೋಡ್ ಆನ್ ಮಾಡಿರುತ್ತೇವೆ. ಇದರಿಂದಾಗಿ ನಮಗೆ ಬೇಕೋ, ಬೇಡವೋ ಒಟ್ಟಿನಲ್ಲಿ ನಮ್ಮ ಮೊಬೈಲ್ ಇಂಟರ್ ನೆಟ್ ನ್ನು ಬಳಸಿ ಈ ಆಪ್ ಗಳು ಅಪ್ ಡೇಟ್ ಆಗುತ್ತಿರುತ್ತವೆ.
ಇಂಟರ್ ನೆಟ್ ಉಳಿತಾಯ ಮಾಡಲು ಉಪಾಯಗಳು
-
ಡಾಟಾ ಬಳಕೆಯನ್ನು ಕಡಿಮೆ ಮಾಡಿ. ಹೆಚ್ಚು ಹೊತ್ತು ಮೊಬೈಲ್ ಬಳಸುವುದನ್ನು ನಿಯಂತ್ರಿಸಿ.
-
ಡಾಟಾ ಬಳಕೆ ಮಾಡದೇ ಇದ್ದಾಗ ಡಾಟಾ ಆಫ್ ಮಾಡಿಟ್ಟುಕೊಳ್ಳಿ. ಇದರಿಂದ ಅಟೋ ಅಪ್ ಡೇಟ್ ಆಗುವುದು ತಪ್ಪುತ್ತದೆ.
-
ಅಟೋ ಸಿಂಕ್ ಡಿಸೇಬಲ್ ಮಾಡಿ.
-
ವೈಫೈ ಲಭ್ಯವಿದ್ದಾಗ ಡಾಟಾ ಆಫ್ ಮಾಡಿ ವೈಫೈ ಬಳಸಿ.
-
ಮ್ಯಾಪ್ ನ್ನು ಆನ್ ಲೈನ್ ನೋಡುವುದರ ಬದಲು ಡೌನ್ ಲೋಡ್ ಮಾಡಿಟ್ಟುಕೊಳ್ಳಿ.
-
ಕ್ಯಾಚೆಗಳನ್ನು ಡಿಲೀಟ್ ಮಾಡಲು ಹೋಗಬೇಡಿ. ಮೆಮೊರಿ ಬೇಕೆಂದು ಕ್ಯಾಚೆಗಳನ್ನು ಡಿಲೀಟ್ ಮಾಡಿದರೆ ಮೊಬೈಲ್ ಮತ್ತೆ ತನ್ನಿಂದ ತಾನೇ ಅವುಗಳನ್ನು ಮತ್ತೆ ಡೌನ್ ಲೋಡ್ ಮಾಡಿಕೊಳ್ಳುತ್ತವೆ.
-
ಬೇಡದೇ ಬರುವ ನೋಟಿಫಿಕೇಶನ್ ಗಳನ್ನು ಆಫ್ ಮಾಡಿ.