Select Your Language

Notifications

webdunia
webdunia
webdunia
webdunia

ಅಯೋಧ್ಯೆಯಲ್ಲಿ ರಾಮಭಕ್ತರಿಗೆ ಮೃಷ್ಟಾನ್ನ ಭೋಜನ

 ಮೃಷ್ಟಾನ್ನ ಭೋಜನ

geetha

ಅಯೋಧ್ಯೆ , ಶುಕ್ರವಾರ, 26 ಜನವರಿ 2024 (21:00 IST)
ಅಯೋಧ್ಯೆ :ಇಸ್ಕಾನ್‌, ಮಹಾವೀರ್‌ ಟೆಂಪಲ್‌ ಟ್ರಸ್ಟ್‌ ಹಾಗೂ  ನಿಹಾಂಗ್‌ ಸಿಖ್ಸ್‌  ಸಂಸ್ಥೆಗಳ ಸಹಯೋಗದಲ್ಲಿ ಈ ಉಚಿತ ಭೋಜನ ವಿತರಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಇದು ದಿನದ 24 ತಾಸು ಎಡೆಬಿಡದೇ ಕಾರ್ಯ ನಿರ್ವಹಿಸಲಿದೆ. ರಾಮಮಂದಿರ ಉದ್ಘಾಟನೆಗೊಂಡ ದಿನದಿಂದ ದಿನೇದಿನೇ ಭಕ್ತಾದಿಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಲೇ ಸಾಗಿದೆ. ಅಯೋಧ್ಯೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತಿಂಡಿ ತೀರ್ಥಗಳ ಬೆಲೆ ಗಗನಕ್ಕೆ ಮುಟ್ಟಿದೆ.

ಈ ಹಿನ್ನೆಲೆಯಲ್ಲಿ ರಾಮಭಕ್ತರ ಹಸಿವು ತಣಿಸಲು ಉಚಿತ ಭೋಜನ ಪೂರೈಸುವ ಅರವಟ್ಟಿಗೆಗಳನ್ನು ತೆರೆಯಲಾಗಿದೆ. ಭಕ್ತಾದಿಗಳಿಗೆ ಕಿಚಡಿ, ಪೂರಿ, ಕಡಿ ಚಾವಲ್‌, ಉಪ್ಪಿನಕಾಯಿ, ಹಪ್ಪಳಗಳನ್ನು ಒದಗಿಸಲಾಗುತ್ತಿದೆ. ಜೊತೆಗೆ ಅಯೋಧ್ಯೆಯಲ್ಲಿ ವಿಪರೀತ ಚಳಿ ಇರುವುದರಿಂದ ಬಿಸಿಬಿಸಿ ಚಹಾ ವ್ಯವಸ್ಥೆ ಕೂಡ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮನೆಗೆ ವಾಪಸ್‌ ಮರಳಿದ್ದೇನೆ-ಜಗದೀಶ್‌ ಶೆಟ್ಟರ್‌