Select Your Language

Notifications

webdunia
webdunia
webdunia
webdunia

ಅಮಿತಾ ಶಾಗೆ ತಿರುಗೇಟು ನೀಡಿದ ಉದ್ಭವ್ ಠಾಕ್ರೆ

ಅಮಿತಾ ಶಾಗೆ ತಿರುಗೇಟು ನೀಡಿದ ಉದ್ಭವ್ ಠಾಕ್ರೆ

rajesh

mumbai , ಗುರುವಾರ, 25 ಜನವರಿ 2024 (15:12 IST)
ಮುಖ್ಯಮಂತ್ರಿ ಏಕನಾಥ್ ಶಿಂಧೆ ಶಾಸಕರನ್ನು ತಮ್ಮೊಂದಿಗೆ ಕರೆದುಕೊಂಡು ಕಾರ್ಯನಿರ್ವಹಿಸಬೇಕು. ಶಾಸಕರ ಸಮಸ್ಯೆಗಳು ಜನತೆಯ ಸಮಸ್ಯೆಗಳಾಗಿರುತ್ತೇವೆ.ಮಹಾರಾಷ್ಟ್ರ ಸರಕಾರದ ಕಾರ್ಯವೈಖರಿ ಬಗ್ಗೆ ಕೆಲವರು ತೃಪ್ತಿ ಹೊಂದಿಲ್ಲ ಎಂದು ಉದ್ಭವ್ ಠಾಕ್ರೆ ತಿಳಿಸಿದ್ದಾರೆ.  
 
ಮುಂಬರುವ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಚುನಾವಣೆ ಗೆಲ್ಲಲು ಸಿದ್ದತೆ ಮಾಡಿಕೊಳ್ಳಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕರೆಗೆ ಪ್ರತಿ ಕರೆ ನೀಡಿದ ಉದ್ಭವ್ ಠಾಕ್ರೆ ಜಮ್ಮು ಕಾಶ್ಮಿರದಲ್ಲೂ ಏಕಪಕ್ಷದ ಸರಕಾರದ ಬಗ್ಗೆ ಮಾತನಾಡುತ್ತಾರೆ ಎಂದು ಲೇವಡಿ ಮಾಡಿದ್ದಾರೆ. 
 
ಜಮ್ಮು ಕಾಶ್ಮಿರದಲ್ಲಿ ಬಿಜೆಪಿ ಪಕ್ಷ ಪಿಡಿಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಮುಫ್ತಿ ಮೊಹಮ್ಮದ್ ಸಯೀದ್ ಅವರನ್ನು ಮಾಜಿ ಮುಖ್ಯಮಂತ್ರಿಯಾಗಿಸಿದೆ ಎಂದು ವ್ಯಂಗ್ಯವಾಡಿದರು.
 
ಏಕಾಂಗಿಯಾಗಿ ಚುನಾವಣಾ ಕಣಕ್ಕೆ ಇಳಿಯುವುದು ತಪ್ಪು ಎಂದು ನಾನು ಭಾವಿಸುವುದಿಲ್ಲ . ಮಹಾರಾಷ್ಟ್ರದ ಬಗ್ಗೆ ಮಾತನಾಡಿದಂತೆ ಜಮ್ಮು ಕಾಶ್ಮಿರದಲ್ಲು ಅದೇ ರೀತಿ ಮಾತನಾಡಲಿ. ಶಿವಸೇನೆ ಏಕಾಂಗಿಯಾಗಿ ಸರಕಾರ ರಚಿಸಲು ನಾನು ಕೂಡಾ ಭಾವಿಸುತ್ತೇನೆ ಎಂದು ತಿರುಗೇಟು ನೀಡಿದ್ದಾರೆ. 
 
ಸ್ವಗೌರವ ಉಳಿದಿಲ್ಲ ಎಂದು ಹೇಳಿಕೆ ನೀಡಿದ ಪವಾರ್ ಮೊದಲು ಅದರ ಅರ್ಥ ತಿಳಿದುಕೊಂಡಲ್ಲಿ ಉತ್ತಮ. ಮೊದಲು ಕಾಂಗ್ರೆಸ್ ತ್ಯಜಿಸಿದರು, ನಂತರ ಮತ್ತೆ ಸೇರ್ಪಡೆಗೊಂಡರು. ಸೋನಿಯಾ ಗಾಂಧಿ ವಿರುದ್ಧ ಹೇಳಿಕೆ ನೀಡಿ ಪಕ್ಷದಿಂದ ಹೊರಹಾಕಿಸಿಕೊಂಡರು. ಮತ್ತೂ ಕೂಡಾ ಕಾಂಗ್ರೆಸ್‌ನಲ್ಲಿ ಮುಂದುವರಿದಿರುವವರಿಂದ ಪಾಠ ಕಲಿಯಬೇಕಾಗಿಲ್ಲ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಪೀಣ್ಯ-ನಾಗಸಂದ್ರ ನಡುವೆ 3 ದಿನ ಮೆಟ್ರೋ ಇಲ್ಲ: ಯಾಕೆ ಇಲ್ಲಿ ನೋಡಿ