Publish Date: Fri, 26 Jan 2024 (19:40 IST)
Updated Date: Fri, 26 Jan 2024 (17:34 IST)
ಬಿಹಾರ್ : ಗಣರಾಜ್ಯೋತ್ಸವ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದೇಶಕ್ಕೆ ಈಗ ರಾಜಕೀಯ ಸ್ಥಿರತೆ ಅತ್ಯಂತ ಅವಶ್ಯಕವಾಗಿದೆ. ಹೀಗಾಗಿ ದೇಶದ ಸಂಸ್ಕೃತಿ ಹಾಗೂ ಸಂಪ್ರದಾಯಗಳನ್ನು ಗೌರವಿಸುವ ರಾಷ್ಟ್ರವಾದಿ ಪಕ್ಷಗಳೆಲ್ಲಾ ಒಗ್ಗಟ್ಟಾಗಲೇಬೇಕಿದೆ ಎಂದು ಹೇಳಿದರು.
ಐಎನ್‌ಡಿಐಎ ಒಕ್ಕೂಟದೊಂದಿಗೆ ಆರ್‌ಜೆಡಿ ಮೈತ್ರಿ ಕಡಿದುಕೊಂಡ ಕುರಿತು ಯೋಗ ಗುರು ರಾಮ್ ದೇವ್ ಬಾಬಾ ಪ್ರತಿಕ್ರಿಯೆ ನೀಡಿದ್ದಾರಿ .ಸಿಎಂ ನಿತೀಶ್ ಕುಮಾರ್ ಅವರೂ ಸಹ ಪ್ರವಾಹದೊಂದಿಗೇ ಸಾಗಲು ನಿರ್ಧರಿಸಿದ್ದು, ಅವರ ರಾಜಕೀಯ ಭವಿಷ್ಯ ಸುರಕ್ಷಿತವಾಗಿರಲಿದೆ ಎಂದು ಹೇಳಿದ್ದಾರೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಐಎನ್‌ಡಿಐಎ ಒಕ್ಕೂಟ ತೊರೆದ ಬೆನ್ನಲ್ಲೇ ಆರ್‌ಜೆಡಿ ಕೂಡ ಮೈತ್ರಿಕೂಟದಿಂದ ಬೇರ್ಪಟ್ಟಿದ್ದಾರೆ. ಲೋಕಸಭಾ ಚುನಾವಣೆಯ ಹೊಸ್ತಿಲಿನಲ್ಲೇ ಇದು ಕಾಂಗ್ರೆಸ್ ಪಕ್ಷಕ್ಕೆ ಆರಂಭಿಕ ಆಘಾತ ನೀಡಿದೆ.