ಉತ್ತರ ಪ್ರದೇಶ: ಹುಲಿ ಹಸಿದಿದ್ದರೆ ಅದಕ್ಕೆ ಯಾವ ಪ್ರಾಣಿಯಾದರೂ ಸೈ. ನುಂಗಿ ನೀರು ಕುಡಿದು ಬಿಡುತ್ತದೆ. ಅದೇ ಆತ್ಮವಿಶ್ವಾಸದಲ್ಲಿ ಹೆಬ್ಬಾವನ್ನು ನುಂಗಲು ಹೋಗಿ ಹುಲಿ ಪಡಬಾರದ ಸಂಕಟ ಅನುಭವಿಸಿದ ವಿಡಿಯೋ ವೈರಲ್ ಆಗಿದೆ.
ಉತ್ತರ ಪ್ರದೇಶದ ಪಿಲಿಭಿತ್ ಹುಲಿ ಅಭಯಾರಣ್ಯದಲ್ಲಿ ಕಂಡುಬಂದ ದೃಶ್ಯ ಇದಾಗಿತ್ತು. ಯಾರೋ ವನ್ಯಪ್ರೇಮಿಗಳು ಪ್ರವಾಸ ಬಂದಿದ್ದಾಗ ಕಂಡುಬಂದ ದೃಶ್ಯವನ್ನು ಸೆರೆಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿದ್ದಾರೆ.
ಹೆಬ್ಬಾವನ್ನು ಅರ್ಧ ತಿಂದ ಹುಲಿ ಬಳಿಕ ಅದನ್ನು ಜೀರ್ಣಿಸಲಾಗದೇ ಪಡಬಾರದ ಕಷ್ಟ ಪಟ್ಟಿದೆ. ಅತ್ತಿತ್ತ ಬಾಲ ಸುಟ್ಟ ಬೆಕ್ಕಿನಂತೆ ಓಡಾಡಿದ್ದು ಹೊಟ್ಟೆ ಸಂಕಟ ತಾಳಲಾರದೇ ವಾಂತಿ ಬರುವಂತಾಗಿದೆ.
ಬಳಿಕ ಹೆಬ್ಬಾವಿನ ಪಕ್ಕದಲ್ಲೇ ಇದ್ದ ಹುಲ್ಲನ್ನು ತಿಂದು ಹೊಟ್ಟೆ ಸಂಕಟ ಕಡಿಮೆ ಮಾಡಲು ಪ್ರಯತ್ನಿಸಿದೆ. ಇಷ್ಟಾದರೂ ಅದರ ಬಾಧೆ ನಿಂತಿರಲಿಲ್ಲ. ಅತ್ತಿತ್ತ ಓಡಾಡಿಕೊಂಡು ತನ್ನ ಸಂಕಟವನ್ನು ಹೇಳಲಾರದೇ ಪಡಬಾರದ ಕಷ್ಟ ಅನುಭವಿಸಿದೆ. ಇಲ್ಲಿದೆ ನೋಡಿ ಆ ವೈರಲ್ ವಿಡಿಯೋ.