ಪಣಜಿ : ಸುಮಾರು 240 ಪ್ರಯಾಣಿಕರಿದ್ದ ರಷ್ಯಾದ ರಾಜಧಾನಿ ಮಾಸ್ಕೋದಿಂದ ಗೋವಾಗೆ ಹೊರಟಿದ್ದ ವಿಮಾನವೊಂದರಲ್ಲಿ ಬಾಂಬ್ ಬೆದರಿಕೆ ಕರೆ ಬಂದಿದ್ದು,
ವಿಮಾನವನ್ನು ಉಜ್ಬೇಕಿಸ್ತಾನದಲ್ಲಿ ತುರ್ತುಭೂಸ್ಪರ್ಶ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಷ್ಯಾದ ಪೆರ್ಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗೋವಾಗೆ ಹೊರಟಿದ್ದ ಅಝುರ್ ಏರ್ ಚಾರ್ಟರ್ಡ್ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದ್ದು, ಬಳಿಕ ಅದನ್ನು ಉಜ್ಬೇಕಿಸ್ತಾನದಲ್ಲಿ ಇಳಿಸಲಾಗಿದೆ.
ವಿಮಾನದಲ್ಲಿ 2 ಶಿಶುಗಳು, 7 ಸಿಬ್ಬಂದಿ ಸೇರಿದಂತೆ ಒಟ್ಟು 238 ಪ್ರಯಾಣಿಕರು ಇದ್ದರು ಎಂದು ಮೂಲಗಳು ತಿಳಿಸಿವೆ.