Publish Date: Sun, 14 May 2023 (08:39 IST)
Updated Date: Sun, 14 May 2023 (10:41 IST)
ನವದೆಹಲಿ : ಭಾರತ ಜಾತ್ಯತೀತ ರಾಷ್ಟ್ರ ಎಂದು ಇಂದು ನಿಜವಾಗಿದೆ. ಈ ಫಲಿತಾಂಶ ಲೋಕಸಭಾ ಚುನಾವಣೆಗೆ ದಿಕ್ಸೂಚಿ. ವಿಶೇಷವಾಗಿ ಕರ್ನಾಟಕ ಜನರಿಗೆ ಧನ್ಯವಾದಗಳು ಎಂದು ಕಾಂಗ್ರೆಸ್ ಹಿರಿಯ ನಾಯಕ ಕೆ.ಹೆಚ್ ಮುನಿಯಪ್ಪ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವನ್ನು ಸ್ಪಷ್ಟವಾಗಿ ಬಹುಮತ ತಂದಿದ್ದಕ್ಕೆ ಕರ್ನಾಟಕ ಜನತೆಗೆ ಧನ್ಯವಾದಗಳು. ಈ ರಾಷ್ಟ್ರದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾಗಿತ್ತು. ಹೀಗಾಗಿ ಜನತೆ ಕಾಂಗ್ರೆಸ್ ಪಕ್ಷದ ಅಧಿಕಾರಕ್ಕೆ ತಂದಿದ್ದಾರೆ. ಪ್ರಜಾಪ್ರಭುತ್ವ ಇದು ಉಳಿದಿದೆ. ಕರ್ನಾಟಕ ಜನತೆಗೆ ಕೋಟಿ ಕೋಟಿ ನಮಸ್ಕಾರಗಳು ಎಂದರು.
ಬಿಜೆಪಿಕೋಮು ಗಲಭೆ ಮಾಡಿ ಮುಂದೆ ಇಟ್ಟು ಅಧಿಕಾರಿಕ್ಕೆ ಬಂದಿದ್ದರು. ಭಾರತ ಜಾತ್ಯತೀತ ರಾಷ್ಟ್ರ ಎಂದು ಇಂದು ನಿಜವಾಗಿದೆ. ಈ ಫಲಿತಾಂಶ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಲಿ ಎಂದು ತಿಳಿಸಿದರು.