ಮೋಚಾ ಚಂಡಮಾರುತ ಜನತೆಯನ್ನು ಭೀತಿಗೆ ತಳ್ಳಿದೆ. ಇದು ಕರಾವಳಿ ಭಾಗದಲ್ಲಿ ಪರಿಣಾಮ ಬೀರಲಿರುವ ಹಿನ್ನೆಲೆಯಲ್ಲಿ ಬಂಗಾಳ ಸೇರಿ ಹಲವೆಡೆ ಮುಂಜಾಗ್ರತಾ ಕ್ರಮವಾಗಿ ಹೈ ಅಲರ್ಟ್ ಘೋಷಿಸಲಾಗಿದೆ. ಶನಿವಾರ ತ್ರಿಪುರಾ, ಮಿಜೋರಾಂ ಮತ್ತು ಬಂಗಾಳದಲ್ಲಿ ಭಾರೀ ಮಳೆಯಾಗಲಿದೆ. ಭಾನುವಾರ ನಾಗಾಲ್ಯಾಂಡ್, ಮಣಿಪುರ, ಅಸ್ಸಾಂನಲ್ಲಿ ರಣಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.