Select Your Language

Notifications

webdunia
webdunia
webdunia
webdunia

ಹೈ ಅಲರ್ಟ್ : ಕೊರೊನಾ ಕೇಸ್ 10 ಸಾವಿರಕ್ಕೆ ಏರಿಕೆ!

ಹೈ ಅಲರ್ಟ್ : ಕೊರೊನಾ ಕೇಸ್ 10 ಸಾವಿರಕ್ಕೆ ಏರಿಕೆ!
ನವದೆಹಲಿ , ಬುಧವಾರ, 29 ಮಾರ್ಚ್ 2023 (12:41 IST)
ನವದೆಹಲಿ : ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚಾಗುತ್ತಿದ್ದು, ಆರೋಗ್ಯ ಇಲಾಖೆ ಫುಲ್ ಅಲರ್ಟ್ ಆಗಿದೆ. ಕಳೆದ 24 ಗಂಟೆಯಲ್ಲಿ 1,805 ಹೊಸ ಕೋವಿಡ್ ಕೇಸ್ ಪತ್ತೆಯಾಗಿದ್ದು, 6 ಮಂದಿ ಬಲಿಯಾಗಿದ್ದಾರೆ. 134 ದಿನಗಳ ಬಳಿಕ ಇದೇ ಮೊದಲ ಬಾರಿ ಸಕ್ರೀಯ ಕೇಸ್ಗಳ ಸಂಖ್ಯೆ 10 ಸಾವಿರ ದಾಟಿದೆ. ಪ್ರತಿದಿನ ಪಾಸಿಟಿವಿಟಿ ಪ್ರಮಾಣ ಶೇ.3.19ಕ್ಕೆ ಹೆಚ್ಚಿದೆ. 
 
ಇದರಿಂದ ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 4,47,05,952 ಮಂದಿಗೆ ಸೋಂಕು ತಲುಪಿದ್ದು, ಅವರಲ್ಲಿ 4,41,64,815 ಮಂದಿ ಗುಣಮುಖರಾಗಿದ್ದಾರೆ. ಅಲ್ಲದೇ 6 ಮಂದಿ ಮೃತಪಟ್ಟಿದ್ದು, ಒಟ್ಟು ಮೃತರ ಸಂಖ್ಯೆ 5,30,837ಕ್ಕೆ ಏರಿಕೆಯಾಗಿದೆ. 10,300 ಸಕ್ರೀಯ ಸೋಂಕು ಪ್ರಕರಣಗಳಿರುವುದು ಕಂಡುಬಂದಿದೆ.

ಈ ಬೆನ್ನಲ್ಲೇ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಎಲ್ಲಾ ರಾಜ್ಯಗಳ ಪ್ರತಿನಿಧಿಗಳ ಜೊತೆ ವರ್ಚುವಲ್ ಸಭೆ ನಡೆಸಿ, ಸೋಂಕು ನಿಯಂತ್ರಣಕ್ಕೆ ಹಲವು ಸಲಹೆ ಸೂಚನೆ ನೀಡಿದ್ದಾರೆ. ಮಾಸ್ಕ್ ಧರಿಸಲು ಹಾಗೂ ಟೆಸ್ಟಿಂಗ್ ಹೆಚ್ಚಳ ಮಾಡಲು ಮಾರ್ಗಸೂಚಿಯಲ್ಲಿ ತಿಳಿಸಿದ್ದಾರೆ


Share this Story:

Follow Webdunia kannada

ಮುಂದಿನ ಸುದ್ದಿ

ವಲಸಿಗರ ಕೇಂದ್ರದಲ್ಲಿ ಭೀಕರ ಅಗ್ನಿ ದುರಂತ : 39 ಮಂದಿ ಸಾವು!