Publish Date: Wed, 25 Jan 2023 (11:21 IST)
Updated Date: Wed, 25 Jan 2023 (11:23 IST)
ಮುಂಬೈ : ರಾಜ್ಯದಲ್ಲಿ 2020ರ ಮಾರ್ಚ್ನಲ್ಲಿ ಕೊರೊನಾ ಕೇಸ್ ದಾಖಲಾದ ಬಳಿಕ ಸುಮಾರು ಎರಡೂವರೆ ವರ್ಷಗಳ ನಂತರ ಶೂನ್ಯ ಪ್ರಕರಣ ದಾಖಲಾಗಿದೆ.
ಮಂಗಳವಾರ ದೈನಂದಿನ ಪ್ರಕರಣಗಳ ಪೈಕಿ ಮುಂಬೈನಲ್ಲಿ ಶೂನ್ಯ ಪಾಸಿಟಿವ್ ಕೇಸ್ ದಾಖಲಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 2,772 ಮಂದಿ ಕೊರೊನಾ ಟೆಸ್ಟ್ ಮಾಡಿಸಿಕೊಂಡಿದ್ದರು ಆದರೆ ಯಾರಿಗೂ ಕೊರೊನಾ ಪಾಸಿಟಿವ್ ಆಗಿಲ್ಲ.
ಈ ಮೂಲಕ 2020ರ ಮಾರ್ಚ್ ಬಳಿಕ ಮೊದಲ ಬಾರಿಗೆ ಶೂನ್ಯ ಪ್ರಕರಣ ದಾಖಲಾಗಿದೆ. ಮುಂಬೈನಲ್ಲಿ ಜನವರಿ ಮೊದಲ ವಾರದಲ್ಲಿ 20,000ಕ್ಕೂ ಹೆಚ್ಚು ಪಾಸಿಟಿವ್ ಕೇಸ್ ದಾಖಲಾಗಿತ್ತು. ಸದ್ಯ 23 ಸಕ್ರಿಯ ಪ್ರಕರಣ ಮುಂಬೈನಲ್ಲಿದೆ.