ಪ್ರಯಾಗ್ ರಾಜ್: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದೆ. ಇದಕ್ಕೆ ಕೋಟ್ಯಾಂತರ ಮಂದಿ ಹೋಗುತ್ತಿದ್ದಾರೆ. ಕುಂಭಮೇಳಕ್ಕೆ ಹೋದರೆ ನೀವು ಈ ಕೆಲಸಗಳನ್ನು ಮಾಡಲು ಮರೆಯದಿರಿ.
ಗಂಗಾನದಿಯ ತಟದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಈ ಬಾರಿ 40 ಕೋಟಿಗೂ ಅಧಿಕ ಮಂದಿ ಆಗಮಿಸುವ ನಿರೀಕ್ಷೆಯಿದೆ. ಈಗಾಗಲೇ ಕೋಟ್ಯಾಂತರ ಮಂದಿ ಕುಂಭಮೇಳಕ್ಕೆ ಹೋಗಿ ಬಂದಿದ್ದಾರೆ. ಇಲ್ಲಿಗೆ ಹೋದರೆ ಮುಖ್ಯವಾಗಿ ನೀವು ಮಾಡಲೇಬೇಕಾದ ಕೆಲಸಗಳೇನು ನೋಡೋಣ.
ಪುಣ್ಯಸ್ನಾನ
ಕುಂಭಮೇಳಕ್ಕೆ ಹೋಗುವುದೇ ಗಂಗಾ ನದಿಯಲ್ಲಿ ಪುಣ್ಯ ಸ್ನಾನ ಮಾಡುವ ಉದ್ದೇಶದಿಂದ. ಗಂಗೆ ನಮ್ಮ ಪಾಪಗಳನ್ನು ತೊಡೆದು ಹಾಕುತ್ತಾಳೆ ಎಂಬ ನಂಬಿಕೆಯಿದೆ. ಅಂತಹದ್ದರಲ್ಲಿ ಇಲ್ಲಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡುವುದು ಬಹಳ ವಿಶೇಷವಾಗಿದೆ. ಗಂಗಾ, ಯಮುನಾ, ಸರಸ್ವತಿ ಎಂಬ ಮೂರು ಪುಣ್ಯ ನದಿಗಳ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವುದರಿಂದ ಪಾಪ ಕಳೆದು ಮೋಕ್ಷ ಸಿಗುತ್ತದೆ ಎಂಬ ನಂಬಿಕೆಯಿದೆ.
ನಾಗಾಸಾಧುಗಳನ್ನು ಭೇಟಿ ಮಾಡಿ
ನಾಗಾಸಾಧುಗಳೆಂದರೆ ಮಹಾನ್ ತಪಸ್ವಿಗಳು. ಅವರು ತಮ್ಮ ಜೀವನವನ್ನಿಡೀ ಭಗವಂತನ ನಾಮಸ್ಮರಣೆಯಲ್ಲೇ ಕಳೆಯುತ್ತಾರೆ. ಅವರು ಕಾಣಸಿಗುವುದೇ ಕುಂಭಮೇಳದ ಸಂದರ್ಭದಲ್ಲಿ. ಅವರ ಜೀವನ ಶೈಲಿಯೇ ವಿಶೇಷವಾದುದು. ಅಂತಹ ನಾಗಾಸಾಧುಗಳನ್ನು ನೋಡಲು ಇದು ಸದವಕಾಶವಾಗಿದೆ.
ಪ್ರಯಾಗ್ ರಾಜ್ ನ ಸೌಂದರ್ಯ ಸವಿಯಬಹುದು
2025 ರ ಕುಂಭಮೇಳಕ್ಕಾಗಿಯೇ ಪ್ರಯಾಗ್ ರಾಜ್ ನಲ್ಲಿ ಗಂಗಾನದಿ ತಟವನ್ನು ವಿಶೇಷ ನಗರಿಯಾಗಿ ನಿರ್ಮಿಸಲಾಗಿದೆ. ಇದಲ್ಲದೆ ಪ್ರಯಾಗ್ ರಾಜ್ ನಲ್ಲಿ ಬಡೆ ಹನುಮಾನ್ ದೇವಾಲಯ, ಅಕ್ಬರನ ಕೋಟೆ ಸೇರಿದಂತೆ ಅನೇಕ ಐತಿಹಾಸಿಕ ಸ್ಥಳಗಳನ್ನು ವೀಕ್ಷಣೆ ಮಾಡಬಹುದು.