Select Your Language

Notifications

webdunia
webdunia
webdunia
webdunia

Guruvayur: ಖಾಸಗಿ ಭಾಗದ ಕೂದಲು ಕಿತ್ತು ತುಳಸಿ ಗಿಡಕ್ಕೆ ಹಾಕಿದ ರೆಸ್ಟೋರೆಂಟ್ ಮಾಲಿಕ ಹಕೀಂ (ವಿಡಿಯೋ)

Hakeem

Krishnaveni K

ಗುರುವಾಯೂರು , ಗುರುವಾರ, 16 ಜನವರಿ 2025 (13:12 IST)
Photo Credit: X
ಗುರುವಾಯೂರು: ಶ್ರೀಕೃಷ್ಣನ ಊರು ಎಂದೇ ಪ್ರಸಿದ್ಧವಾಗಿರುವ ಕೇರಳದ ಗುರುವಾಯೂರು ಕ್ಷೇತ್ರದ ಸಮೀಪ ಪ್ಯಾರಾಡೈಸ್ ಎನ್ನುವ ರೆಸ್ಟೋರೆಂಟ್ ಮಾಲಿಕ ಹಕೀಂ ತನ್ನ ಖಾಸಗಿ ಭಾಗದ ಕೂದಲು ಕಿತ್ತು ತುಳಸಿ ಗಿಡಕ್ಕೆ ಹಾಕುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೇ ಹಿಂದೂಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಗುರುವಾಯೂರು ಕ್ಷೇತ್ರದ ಪಕ್ಕವೇ ಈತನ ರೆಸ್ಟೋರೆಂಟ್ ಇದೆ. ಇದೀಗ ಸಿಸಿಟಿವಿಗಳಲ್ಲಿ ಈತ ತನ್ನ ಖಾಸಗಿ ಭಾಗದ ಕೂದಲು ಕಿತ್ತು ತುಳಸಿ ಗಿಡಕ್ಕೆ ಹಾಕಿ ವಿಕೃತ ನಗೆ ನಕ್ಕು ಮುಂದೆ ಸಾಗುವ ದೃಶ್ಯವನ್ನು ಕಾಣಬಹುದಾಗಿದೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೇ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಂದು ಧರ್ಮವನ್ನು ಅಣಕಿಸುವ ರೀತಿಯ ಕೃತ್ಯವೆಸಗಿ ಶಾಂತಿಗೆ ಧಕ್ಕೆ ತರುವ ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಇದರ ಬೆನ್ನಲ್ಲೆ ಹಿಂದೂ ಐಕ್ಯ ವೇದಿ ಸಂಘಟನೆ ಹೋಟೆಲ್ ಮಾಲಿಕ ಹಕೀಂ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಿದೆ.

ತುಳಸಿ ಗಿಡವನ್ನು ಹಿಂದೂಗಳು ಪವಿತ್ರ ಸ್ಥಾನ ಕೊಟ್ಟು ಪೂಜೆ ಮಾಡುತ್ತಾರೆ. ಆದರೆ ಈತನ ಕೃತ್ಯದಿಂದ ಹಿಂದೂ ಧರ್ಮೀಯರ ಭಾವನೆಗಳಿಗೆ ನೋವಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಇದೀಗ ಪೊಲೀಸರು ಈಗ ಈತನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ವೈರಲ್ ಆಗಿರುವ ವಿಡಿಯೋ ಇಲ್ಲಿದೆ ನೋಡಿ.


Share this Story:

Follow Webdunia kannada

ಮುಂದಿನ ಸುದ್ದಿ

ಲಾಲ್ ಭಾಗ್ ಫ್ಲವರ್ ಶೋಗೆ ಸಿದ್ದರಾಮಯ್ಯ ಚಾಲನೆ: ಎಂಟ್ರಿ ಫೀ, ಆನ್ ಲೈನ್ ಬುಕಿಂಗ್ ಡೀಟೈಲ್ಸ್ ಇಲ್ಲಿದೆ