Select Your Language

Notifications

webdunia
webdunia
webdunia
webdunia

ವಾರಕ್ಕೆ 90 ಗಂಟೆ ಕೆಲಸ: ಸುಬ್ರಹ್ಮಣ್ಯನ್‌ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ಏನದ್ರು ಗೊತ್ತಾ

AICC President Mallikarjuna Kharge

Sampriya

ನವದೆಹಲಿ , ಬುಧವಾರ, 15 ಜನವರಿ 2025 (17:30 IST)
Photo Courtesy X
ನವದೆಹಲಿ: ಎಲ್‌ಅಂಡ್‌ಟಿ ಕಂಪನಿ ಸಿಇಒ ಎಸ್‌.ಎನ್‌. ಸುಬ್ರಹ್ಮಣ್ಯನ್ ಅವರ ವಾರಕ್ಕೆ 90 ಗಂಟೆಗಳ ಕೆಲಸ ಹೇಳಿಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ಸುಬ್ರಹ್ಮಣ್ಯನ್ ಅವರ ಹೇಳಿಕೆಗೆ ಸಹಮತವಿಲ್ಲ ಎಂದಿದ್ದಾರೆ.

ಕಾರ್ಮಿಕರು ದಿನಕ್ಕೆ 8 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಬಾರದು ಎಂದು ಮಾಜಿ ಪ್ರಧಾನಿ ಜವಾಹರ ಲಾಲ್‌ ನೆಹರೂ ಮತ್ತು ಬಿ.ಆರ್‌.ಅಂಬೇಡ್ಕರ್ ಪ್ರತಿಪಾದಿಸಿದ್ದರು ಎಂದು ಖರ್ಗೆ ಹೇಳಿದ್ದಾರೆ.

ನೂತನವಾಗಿ ನಿರ್ಮಾಣಗೊಂಡಿರುವ ಪಕ್ಷದ ಕೇಂದ್ರ ಕಚೇರಿ ಉದ್ಘಾಟನೆ ಬಳಿಕ ಪಕ್ಷದ ಮುಖಂಡರನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, ಈ ನೂತನ ಕಟ್ಟಡವನ್ನು ನಿರ್ಮಿಸಿದ ಎಲ್‌ಅಂಡ್‌ಟಿ ಕನ್‌ಸ್ಟ್ರಕ್ಷನ್‌ ಕಂಪನಿ, ಅದರ ವಾಸ್ತುಶಿಲ್ಪಿಗಳು ಮತ್ತು ಕಾರ್ಮಿಕರಿಗೆ ನಾನು ಧನ್ಯವಾದ ತಿಳಿಸುತ್ತೇನೆ. ಆದರೆ, ಕಂಪನಿ ಸಿಇಒ ಮಾಡಿರುವ ವಾರಕ್ಕೆ 90 ಗಂಟೆ ಕೆಲಸ ಹೇಳಿಕೆಗೆ ನನ್ನ ಅಸಮ್ಮತಿಯಿದೆ ಎಂದರು.

ಒಬ್ಬ ಕಾರ್ಮಿಕ 8 ಗಂಟೆಗಳ ಕಾಲ ಕೆಲಸ ಮಾಡಿ ಆಯಾಸಗೊಳ್ಳುತ್ತಾನೆ. ಅದಕ್ಕಾಗಿಯೇ ಅಂಬೇಡ್ಕರ್ ಮತ್ತು ನೆಹರೂ ಅವರು ಕಾರ್ಖಾನೆ ಕಾಯ್ದೆ ಜಾರಿಗೆ ತರುವಾಗ ಕಾರ್ಮಿಕರು ಎಂಟು ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಿಸಬಾರದು ಎಂದಿದ್ದರು. ಹೀಗಾಗಿ ವಾರಕ್ಕೆ 90 ಗಂಟೆ ಕೆಲಸಕ್ಕೆ ಸಮ್ಮತಿಯಿಲ್ಲ ಎಂದು ಈ ಹಿಂದೆ ಕಾರ್ಮಿಕ ಸಚಿವರಾಗಿ ಸೇವೆ ಸಲ್ಲಿಸಿದ್ದ ಖರ್ಗೆ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿ ಅಖಾಢಕ್ಕೆ ಧುಮುಕಿದ ಅಖಿಲೇಶ್‌: ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯಲು ಪ್ಲಾನ್‌