Select Your Language

Notifications

webdunia
webdunia
webdunia
webdunia

IND vs IRE ODI: ODIನಲ್ಲಿ ಪುರುಷರ ತಂಡವನ್ನೂ ಹಿಂದಿಕ್ಕಿ ಬೃಹತ್ ಮೊತ್ತ ಪೇರಿಸಿದ ಭಾರತ ಮಹಿಳಾ ತಂಡ

Smriti Mandhana-Pratika

Krishnaveni K

ರಾಜ್ ಕೋಟ್ , ಬುಧವಾರ, 15 ಜನವರಿ 2025 (15:39 IST)
Photo Credit: X
ರಾಜ್ ಕೋಟ್: ಭಾರತ ಮತ್ತು ಐರ್ಲೆಂಡ್ ನಡುವೆ ನಡೆಯುತ್ತಿರುವ ಮಹಿಳೆಯರ ಏಕದಿನ ಪಂದ್ಯದಲ್ಲಿ ಭಾರತ ತಂಡ ಪುರುಷರ ತಂಡವನ್ನೂ ಮೀರಿಸಿ ಬೃಹತ್ ಮೊತ್ತದ ದಾಖಲೆ ಬರೆದಿದೆ.

ಸ್ಮೃತಿ ಮಂಧನಾ ನೇತೃತ್ವದ ಭಾರತ ಮಹಿಳಾ ತಂಡ ಇಂದು ಮೊದಲು ಬ್ಯಾಟಿಂಗ್ ಮಾಡಿ 5 ವಿಕೆಟ್ ನಷ್ಟಕ್ಕೆ 435 ರನ್ ಗಳಿಸಿತ್ತು. ಇದು ಭಾರತದ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಗರಿಷ್ಠ ಮೊತ್ತವಾಗಿದೆ. ಪುರುಷರ ತಂಡವನ್ನೂ ಈ ಮೂಲಕ ಮಹಿಳೆಯವರು ಮೀರಿಸಿದ್ದಾರೆ.

ಭಾರತದ ಪುರುಷರ ತಂಡ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಕ್ರಿಕೆಟ್ ನಲ್ಲಿ 5 ವಿಕೆಟ್ ನಷ್ಟಕ್ಕೆ 418 ರನ್ ಗಳಿಸಿದ್ದು ಈವರೆಗಿನ ಅತ್ಯಧಿಕ ಮೊತ್ತವಾಗಿತ್ತು. ಆದರೆ ಈಗ ಮಹಿಳೆಯರ ತಂಡ ಆ ಮೊತ್ತವನ್ನೂ ಮೀರಿ ದಾಖಲೆ ಮಾಡಿದೆ.

ಇದಕ್ಕೆ ಕಾರಣವಾಗಿದ್ದು ಸ್ವತಃ ನಾಯಕಿ ಸ್ಮೃತಿ ಮಂಧಾನಾ ಮತ್ತು ಮತ್ತೊಬ್ಬ ಆರಂಭಿಕ ಆಟಗಾರ್ತಿ ಪ್ರತೀಕ ರಾವಲ್ ಭರ್ಜರಿ ಬ್ಯಾಟಿಂಗ್. ಈ ಇಬ್ಬರೂ ಮೊದಲ ವಿಕೆಟ್ ಗೆ 233 ರನ್ ಗಳ ಬೃಹತ್ ಮೊತ್ತ ಪೇರಿಸಿದರು. ಸ್ಮೃತಿ 80 ಎಸೆತಗಳಲ್ಲಿ 135 ರನ್ ಗಳಿಸಿ ಔಟಾದರು. ಈ ಮೂಲಕ ಅವರು ಮಹಿಳಾ ಏಕದಿನ ಕ್ರಿಕೆಟ್ ನಲ್ಲಿ ಭಾರತದ ಪರ ವೇಗದ ಶತಕ ಗಳಿಸಿದ ದಾಖಲೆ ಮಾಡಿದರು. ಇನ್ನೊಂದೆಡೆ ಪ್ರತೀಕ 129 ಎಸೆತಗಳಿಂದ 154 ರನ್ ಗಳಿಸಿದರು. ಇದರೊಂದಿಗೆ ಭಾರತ ಮಹಿಳಾ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮಂದಾನ ಅತಿ ವೇಗದ ಶತಕ ದಾಖಲೆ: ಭಾರತದ ಬ್ಯಾಟಿಂಗ್‌ ಅಬ್ಬರಕ್ಕೆ ಐರ್ಲೆಂಡ್‌ ತಬ್ಬಿಬ್ಬು