ನವದೆಹಲಿ: 2024ರ ಲೋಕಸಭೆ ಚುನಾವಣೆಯಲ್ಲಿ ಭಾರತದ ಅಂದಿನ ಸರ್ಕಾರ ಅಧಿಕಾರ ಕಳೆದುಕೊಳ್ಳಲಿದೆ ಎಂಬ ಮಾರ್ಕ್ ಝುಕರ್ಬರ್ಗ್ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆಯೇ ಮೆಟಾ ಕ್ಷಮೆಯಾಚನೆ ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮೆಟಾ ಸಂಸ್ಥೆ, ಝುಕರ್‌ಬರ್ಗ್ ಹೇಳಿಕೆಯನ್ನು ಅಪ್ರಜ್ಞಾಪೂರ್ವಕ ದೋಷ ಎಂದು ಹೇಳಿದೆ. ಝುಕರ್ಬರ್ಗ್ ಹೇಳಿಕೆಗೆ ಬಗ್ಗೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಅದ್ದೇಶಿಸಿ ಪ್ರತಿಕ್ರಿಯೆ ನೀಡಿರುವ ಮೆಟಾ ಇಂಡಿಯಾದ ಉಪಾಧ್ಯಕ್ಷ ಶಿವಂತ್ ತುಕ್ರಾಲ್ ಮಾತನಾಡಿದ್ದಾರೆ.
ಅಧಿಕಾರದಲ್ಲಿದ್ದ ಹಲವು ಪಕ್ಷಗಳು 2024 ರಲ್ಲಿ ಮತ್ತೆ ಅಧಿಕಾರಕ್ಕೆ ಬರಲಿಲ್ಲ ಎಂಬ ಮಾರ್ಕ್ ಝುಕರ್ಬರ್ಗ್ ಅವರ ಹೇಳಿಕೆ ಹಲವು ರಾಷ್ಟ್ರಗಳಿಗೆ ಹೊಂದಾಣಿಕೆಯಾಗುತ್ತದೆ. ಆದರೆ ಭಾರತಕ್ಕೆ ಅಲ್ಲಎಂದು ಶಿವಂತ್ ಸ್ಪಷ್ಟನೆ ನೀಡಿದ್ದಾರೆ.
ಈ ಅಜಾಗರೂಕ ತಪ್ಪಿಗೆ ನಾವು ಕ್ಷಮೆಯಾಚಿಸುತ್ತೇವೆ. ಭಾರತವು ಮೆಟಾಗೆ ಪ್ರಮುಖ ದೇಶವಾಗಿ ಉಳಿದಿದೆ ಮತ್ತು ಭಾರತದ ನವೀನ ಭವಿಷ್ಯದ ಕೇಂದ್ರಭಾಗದಲ್ಲಿರುವುದನ್ನು ನಾವು ಎದುರು ನೋಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸಚಿವೆ ಅಶ್ವಿನಿ ವೈಷ್ಣವ್ ಈ ಹಿಂದೆ ಜೋ ರೋಗನ್ ಪಾಡ್‌ಕ್ಯಾಸ್ಟ್‌ನಲ್ಲಿ ಜುಕರ್‌ಬರ್ಗ್ ಮಾಡಿದ ಹೇಳಿಕೆಗಳನ್ನು ಖಂಡಿಸಿದ್ದರು. 2024 ರ ಚುನಾವಣೆಯಲ್ಲಿ ಭಾರತ ಸೇರಿದಂತೆ ಹೆಚ್ಚಿನ ಅಧಿಕಾರದಲ್ಲಿದ್ದ ಪಕ್ಷಗಳು ಕೋವಿಡ್ ನಂತರ ಸೋತಿವೆ ಎಂಬ ಜುಕರ್‌ಬರ್ಗ್ ಅವರ ಹೇಳಿಕೆ ವಾಸ್ತವಿಕವಾಗಿ ತಪ್ಪಾಗಿದೆ ಎಂದು ವೈಷ್ಣವ್ ಜನವರಿ 13 ರಂದು ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ಹೇಳಿದ್ದರು.