Select Your Language

Notifications

webdunia
webdunia
webdunia
webdunia

ಕೊನೆಗೂ ಡಾಲರ್‌ ಎದುರು ಕೊಂಚ ತಲೆಯೆತ್ತಿದ ರೂಪಾಯಿ: ಎರಡನೇ ದಿನ 13 ಪೈಸೆ ಏರಿಕೆ

ಕೊನೆಗೂ ಡಾಲರ್‌ ಎದುರು ಕೊಂಚ ತಲೆಯೆತ್ತಿದ ರೂಪಾಯಿ: ಎರಡನೇ ದಿನ 13 ಪೈಸೆ ಏರಿಕೆ

Sampriya

ಮುಂಬೈ , ಬುಧವಾರ, 15 ಜನವರಿ 2025 (17:47 IST)
ಮುಂಬೈ: ಅಮೆರಿಕದ ಡಾಲರ್‌ ಎದುರು ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯವು ಚೇತರಿಕೆಯ ಹಳಿಗೆ ಮರಳಿದೆ.

ಸತತ ಎರಡನೇ ದಿನವಾದ ಬುಧವಾರ ರೂಪಾಯಿ ಮೌಲ್ಯ 13 ಪೈಸೆ ಏರಿಕೆಯಾಗಿದೆ. ಪ್ರತೀ ಡಾಲರ್‌ ಮೌಲ್ಯ ₹86.40 ಆಗಿದೆ. ಮಂಗಳವಾರದ ವಹಿವಾಟಿನಲ್ಲಿ ರೂಪಾಯಿ ಮೌಲ್ಯವು 17 ಪೈಸೆ ಹೆಚ್ಚಳವಾಗಿತ್ತು.

ಆರಂಭಿಕ ವಹಿವಾಟಿನಲ್ಲಿ ₹86.50 ಇದ್ದ ರೂಪಾಯಿ ಮೌಲ್ಯವು, ಇಂಟ್ರಾಡೇನಲ್ಲಿ ₹86.55ಕ್ಕೆ ತಲುಪಿತ್ತು. ವಹಿವಾಟಿನ ಒಂದು ಸಂದರ್ಭದಲ್ಲಿ ₹86.28ಕ್ಕೆ ಮುಟ್ಟಿತ್ತು.

ದೇಶೀಯ ಷೇರುಪೇಟೆಯು ಏರಿಕೆ ದಾಖಲಿಸಿದೆ. ಅಲ್ಲದೆ, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯು ಇಳಿಕೆಯಾಗುತ್ತಿದೆ. ಇದು ವಿನಿಮಯ ಮಾರುಕಟ್ಟೆಯಲ್ಲಿ ಒತ್ತಡಕ್ಕೆ ಸಿಲುಕಿದ್ದ ರೂಪಾಯಿ ಮೌಲ್ಯವು ಚೇತರಿಸಿಕೊಳ್ಳಲು ನೆರವಾಗಿದೆ.

ದಾಖಲೆ ಮಟ್ಟಕ್ಕೆ ಏರಿಕೆ ಕಂಡಿದ್ದ ಡಾಲರ್‌ ಸೂಚ್ಯಂಕ ಕೂಡ ಇಳಿದಿದೆ. ಇದು ಕೂಡ ರೂಪಾಯಿ ಮೌಲ್ಯ ಹೆಚ್ಚಳಕ್ಕೆ ಕಾರಣವಾಗಿದೆ. ಆದರೆ, ದೇಶೀಯ ಷೇರುಪೇಟೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬಂಡವಾಳ ಹಿಂಪಡೆಯುವುದು ಮುಂದುವರಿದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಾರಕ್ಕೆ 90 ಗಂಟೆ ಕೆಲಸ: ಸುಬ್ರಹ್ಮಣ್ಯನ್‌ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ಏನದ್ರು ಗೊತ್ತಾ