ಪಿಎಫ್ ಖಾತೆಯಲ್ಲಿ ಎಷ್ಟು ಹಣವಿದೆ ಎಂದು ಸುಲಭವಾಗಿ ಚೆಕ್ ಮಾಡುವುದು ಹೇಗೆ ನೋಡಿ

Krishnaveni K
ಶುಕ್ರವಾರ, 17 ಜನವರಿ 2025 (11:09 IST)
ಬೆಂಗಳೂರು: ಪಿಎಫ್ ಖಾತೆಯಲ್ಲಿ ಎಷ್ಟು ಹಣವಿದೆ ಎಂದು ಸುಲಭವಾಗಿ ಚೆಕ್ ಮಾಡಲು ಹೆಚ್ಚು ಕಷ್ಟಪಡಬೇಕಾಗಿಲ್ಲ. ಅದಕ್ಕೆ ನೀವು ಇದೊಂದು ಕೆಲಸ ಮಾಡಿದರೆ ಸಾಕು. ಇಲ್ಲಿದೆ ವಿವರ.

ಪಿಎಫ್ ಖಾತೆದಾರರಿಗೆ ಯುಎಎನ್ ನಂಬರ್ ಕೊಡಲಾಗುತ್ತದೆ. ಯುಎಎನ್ ನಂಬರ್ ಎಂದರೆ ಯೂನಿವರ್ಸಲ್ ಅಕೌಂಟ್ ನಂಬರ್ ಎಂದು ಅರ್ಥ. ಫ್ರಾವಿಡೆಂಟ್ ಫಂಡ್ ಸಂಸ್ಥೆಯಲ್ಲಿ ಎಲ್ಲಾ ಖಾತೆದಾರರಿಗೂ ಈ 12 ಅಂಕಿಯ ನಂಬರ್ ಕೊಡಲಾಗುತ್ತದೆ. ಇದನ್ನು ಜೋಪಾನವಾಗಿಟ್ಟುಕೊಳ್ಳಿ.

ಈ ನಂಬರ್ ಇದ್ದರೆ ನೀವು ಯಾವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೂ ಪಿಎಫ್ ಬಗ್ಗೆ ಮಾಹಿತಿ ಪಡೆಯಬಹುದು.ಇದೊಂದು ಸಾರ್ವತ್ರಿಕ ನಂಬರ್ ಆಗಿದೆ. https://unifiedportal-mem.epfindia.gov.in/memberinterface/ ಎಂಬ ನಿಮ್ಮ ಇಪಿಎಫ್ ಒ ಪೋರ್ಟಲ್ ನಲ್ಲಿ ನಿಮ್ಮ ಯುಎಎನ್ ನಂಬರ್ ಕೊಟ್ಟು ಲಾಗಿನ್ ಆಗಿ. ಮ್ಯಾನೇಜ್ ಮೆಂಟ್ ಟ್ಯಾಬ್ ನಲ್ಲಿ ಡ್ರಾಪ್ ಡೌನ್ ಮೆನುವಿನಿಂದ ಕೆವೈಸಿ ಆಯ್ಕೆ ಮಾಡಿ.

ಮುಂದಿನ ಪುಟದಲ್ಲಿ ಯಾವ ಬ್ಯಾಂಕ್ ಅಕೌಂಟ್ ಲಿಕ್ ಆಗಿದೆ ಎಂದು ತೋರಿಸುತ್ತದೆ. ಈಗ ಲಿಂಕ್ ಮಾಡಬೇಕಾದ ಬ್ಯಾಂಕ್ ಅಕೌಂಟ್ ನಂಬರ್ ಕೊಡಿ. ಬ್ಯಾಂಕ್ ಅಕೌಂಟ್ ನಂಬರ್, ಐಎಫ್ ಎಸ್ ಸಿ ಕೋಡ್ ದೃಢೀಕರಿಸಿ.ಐಎಫ್ಎಸ್ ಸಿ ಟ್ಯಾಬ್ ಚೆಕ್ ಮಾಡಿ ಕ್ಲಿಕ್ ಕೊಡಿ.

ಆಧಾರ್ ಗೆ ಲಿಂಕ್ ಆಗಿರುವ ನಿಮ್ಮ ಮೊಬೈಲ್ ಸಂಖ್ಯೆಗೆ ಒಂದು ಒಟಿಪಿ ಬರುತ್ತದೆ. ಈ ಒಟಿಪಿಯನ್ನು ಹಾಕಿ ಬ್ಯಾಂಕ್ ಅಕೌಂಟ್ ವೆರಿಫಿಕಷನ್ ಪ್ರಕ್ರಿಯೆಯಲ್ಲಿದೆ ಎಂದು ಮೆಸೇಜ್ ಬರುತ್ತದೆ.

ನೆನಪಿರಲಿ, ನಿಮ್ಮ ಮಾಹಿತಿಗಳು ರಹಸ್ಯವಾಗಿರಲಿ. ನಿಮ್ಮ ಯುಎಎನ್ ಸಂಖ್ಯೆ, ಪಾಸ್ ವರ್ಡ್, ಖಾತೆ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳದಿರಿ. ಇದರಿಂದ ವಂಚನೆಗಳಾಗುವುದನ್ನು ತಡೆಯಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Gold Price: ಚಿನ್ನದ ದರ ಇಂದು ಮತ್ತೆ ಬಲು ದುಬಾರಿ

Arecanut Price: ಅಡಿಕೆ, ಕೊಬ್ಬರಿ ಇಂದಿನ ಬೆಲೆ ಇಲ್ಲಿದೆ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಎರಡನೇ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡುತ್ತಿರುವುದು ಇದಕ್ಕೇ

ಮೆಟ್ಟಿಲು ಹತ್ತುವಾಗ ಹೃದಯ ಖಾಯಿಲೆ ಪರೀಕ್ಷಿಸುವುದು ಹೇಗೆ: ಡಾ ಸಿಎನ್ ಮಂಜುನಾಥ್ ಟಿಪ್ಸ್

ಮಲ್ಲಿಕಾರ್ಜುನ ಖರ್ಗೆ ಜೊತೆ ಸೋನಿಯಾ ಗಾಂಧಿ ಮೀಟಿಂಗ್: ಮೇಡಂ ಕೈಯಲ್ಲಿ ಎಲ್ಲಾ ಇದೆ

ಮುಂದಿನ ಸುದ್ದಿ
Show comments