Select Your Language

Notifications

webdunia
webdunia
webdunia
webdunia

ಕೆಲವೆಡೆ ಕಾಲಿಟ್ಟಿದೆ ಮತ್ತೊಂದು ವಿಚಿತ್ರ ಜ್ವರ

ಕೆಲವೆಡೆ ಕಾಲಿಟ್ಟಿದೆ ಮತ್ತೊಂದು ವಿಚಿತ್ರ ಜ್ವರ
ಲಖನೌ , ಸೋಮವಾರ, 30 ಆಗಸ್ಟ್ 2021 (09:41 IST)
ಲಖನೌ : ಕರೊನಾ ಮಹಾಮಾರಿಯಿಂದ ಇಡೀ ವಿಶ್ವವೇ ಇನ್ನೂ ಸುಧಾರಿಸಿಕೊಳ್ಳುತ್ತಿಲ್ಲ, ಇದರ ನಡುವೆಯೇ 2, 3ನೇ ಅಲೆ, ಡೆಲ್ಟಾ ವೈರಸ್, ಬ್ಲ್ಯಾಕ್ ಸೇರಿದಂತೆ ಹಲವು ಫಂಗಸ್ಗಳು ಜನರ ಜೀವವನ್ನು ಹಿಂಡಿ ಹಿಪ್ಪೆ ಮಾಡಿರುವ ಈ ಸಂದರ್ಭದಲ್ಲಿ ಈಗ ಮತ್ತೊಂದು ನಿಗೂಢ ಜ್ವರ ಕಾಣಿಸಿಕೊಂಡಿದೆ.

ಉತ್ತರ ಪ್ರದೇಶದ ಹಲವು ಪಟ್ಟಣಗಳಲ್ಲಿ ಈ ಜ್ವರ ಕಾಣಿಸಿಕೊಂಡಿದ್ದು, ಹಲವರ ಸಾವಿಗೆ ಕಾರಣವಾಗಿದೆ. ಕಳೆದ ಏಳು ದಿನಗಳಲ್ಲಿ ಆಗ್ರಾ, ಫಿರೋಜಾಬಾದ್, ಮಥುರಾ, ಮೈನ್ ಪುರಿ, ಎತಾ ಮತ್ತು ಕಾಸ್ ಗಂಜ್ ಜಿಲ್ಲೆಗಳಲ್ಲಿ ಹಲವರು ಈ ವಿಚಿತ್ರ ಜ್ವರಕ್ಕೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಹೇಳಿದೆ.
ಉತ್ತರ ಪ್ರದೇಶ ಮಾತ್ರವಲ್ಲದೇ ರಾಜಸ್ಥಾನ ಮತ್ತು ಮಧ್ಯಪ್ರದೇಶದಂತಹ ಇತರ ರಾಜ್ಯಗಳು ಸಹ ಇದೇ ರೀತಿಯ ವೈರಲ್ ಜ್ವರ ಕಾಣಿಸಿಕೊಂಡಿದೆ.
ಈ ಜ್ವರ ಕಾಣಿಸಿಕೊಂಡ ರೋಗಿಯ ದೇಹದಲ್ಲಿ ಹೆಚ್ಚಿನ ಪ್ರಮಾಣದ ನಿರ್ಜಲೀಕರಣ (ಡೀಹೈಡ್ರೇಷನ್) ಉಂಟಾಗುವುದು ಮಾತ್ರವಲ್ಲದೇ ಪ್ಲೇಟ್ಲೆಟ್ ಎಣಿಕೆಯಲ್ಲಿ ಹಠಾತ್ ಕುಸಿತ ಕಾಣಿಸುತ್ತಿದೆ. ಇಂಥ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಒದಗಿಸಲು ಸಾಧ್ಯವಾಗದೇ ಪರಿಸ್ಥಿತಿ ನಿಯಂತ್ರಣ ಮೀರಿ ಹೋಗುತ್ತಿದೆ. ಇದಾಗಲೇ ಕರೊನಾ ಸೇರಿದಂತೆ ಕೆಲವು ಸೋಂಕಿನ ರೋಗಿಗಳಿಂದ ತುಂಬಿ ಹೋಗಿರುವ ಆಸ್ಪತ್ರೆಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ ಆಡಳಿತವು ಹೈ ಅಲರ್ಟ್ ಘೋಷಣೆ ಮಾಡಿದ್ದು, ತೀವ್ರ ಜ್ವರ ಹೊಂದಿರುವ ರೋಗಿಗಳ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ತನ್ನ ಆರೋಗ್ಯ ಕಾರ್ಯಕರ್ತರಿಗೆ ತಿಳಿಸಿದೆ. ಈ ವಿಚಿತ್ರ ಜ್ವರವು ಮಾರಣಾಂತಿಕವಾಗಿದೆ, ಇದರಿಂದ ಜನರು ಚೇತರಿಸಿಕೊಳ್ಳಲು ಎರಡು ವಾರಕ್ಕಿಂತಲೂ ಹೆಚ್ಚು ದಿನಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಸದ್ಯ ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಈ ಸೋಂಕು ಅಧಿಕವಾಗಿ ಕಾಣಿಸಿಕೊಂಡಿದೆ, ಪೂರ್ವ ಭಾಗಗಳಲ್ಲಿಯೂ ಸಾವಿನ ವರದಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಗೊಂಡಾ, ಬಸ್ತಿ, ಡಿಯೋರಿಯಾ, ಬಲ್ಲಿಯಾ, ಅಜಮ್ ಘರ್, ಸುಲ್ತಾನ್ ಪುರ್, ಜಾನ್ಪುರ್ ಮತ್ತು ಗಾಜಿಪುರ್ನಲ್ಲಿ ಹೆಚ್ಚಿನ ಮಂದಿ ಈ ಸೋಂಕಿನಿಂದ ಬಳಲುತ್ತಿದ್ದಾರೆ.
ಸೊಳ್ಳೆಗಳಿಂದ ದೂರವಿರುವಂತೆ ಹಾಗೂ ಯಾವುದೇ ವ್ಯಕ್ತಿಯು ಯಾವುದೇ ರೀತಿಯ ಜ್ವರಕ್ಕೆ ಒಳಗಾಗಿದ್ದರೆ ಅವರು ಸ್ವತಃ ಚಿಕಿತ್ಸೆ ನೀಡುವ ಬದಲು ತಕ್ಷಣವೇ ವೈದ್ಯರಿಗೆ ವರದಿ ಮಾಡಬೇಕು ಎಂದು ಅರೋಗ್ಯ ಇಲಾಖೆ ತಿಳಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಹೆಣ್ಣು ಮಗು ಹಡೆದಿದ್ದಕ್ಕೆ ಪತ್ನಿಯನ್ನೇ ಕೊಂದ ಭೂಪ