Select Your Language

Notifications

webdunia
webdunia
webdunia
webdunia

ಬೇಸಿಗೆಯಲ್ಲಿ ಕಪ್ಪು ಕೋಟು ಧರಿಸುವುದಕ್ಕೆ ವಿನಾಯಿತಿ ನೀಡಿ ಎಂದು ಮನವಿ ಸಲ್ಲಿಸಿದ ವಕೀಲ

ಬೇಸಿಗೆಯಲ್ಲಿ ಕಪ್ಪು ಕೋಟು ಧರಿಸುವುದಕ್ಕೆ ವಿನಾಯಿತಿ ನೀಡಿ ಎಂದು ಮನವಿ ಸಲ್ಲಿಸಿದ ವಕೀಲ
ನವದೆಹಲಿ , ಸೋಮವಾರ, 30 ಆಗಸ್ಟ್ 2021 (08:21 IST)
ಸುಪ್ರೀಂಕೋರ್ಟ್ನಲ್ಲಿ ವಾದ ಮಾಡಲು ಮಾನ್ಯತೆ ಪಡೆದಿರುವ ವಕೀಲರು ಹಾಗೂ ಹೈಕೋರ್ಟಿನ ವಕೀಲರು ನ್ಯಾಯಲಯದ ಕಲಾಪದ ವೇಳೆ ಕಪ್ಪು ಕೋಟುಗಳು ಮತ್ತು ಗೌನ್ಗಳನ್ನು ಧರಿಸುವುದಕ್ಕೆ ವಿನಾಯಿತಿ  ನೀಡುವಂತೆ  ಸುಪ್ರೀಂ ಕೋರ್ಟಿನಲ್ಲಿ ಮನವಿ ಸಲ್ಲಿಸಲಾಗಿತ್ತು. ಈ ವಿಚಾರವಾಗಿ ಕೋರ್ಟ್ ಒಂದಷ್ಟು ಸಲಹೆ ಸೂಚನೆಗಳನ್ನು ನೀಡಲಾಗಿದೆ.

ಈ ಮನವಿಯಲ್ಲಿ ಹೀಗೆ ತಿಲಿಸಲಾಗಿದ್ದು ಬೇಸಿಗೆಯು ಕೆಲವೊಂದು ರಾಜ್ಯಗಳಲ್ಲಿ ಸಾಕಷ್ಟು ಪ್ರಕರವಾಗಿರುತ್ತದೆ, ಅಲ್ಲದೇ ಇಂತಹ ಸಂದರ್ಭದಲ್ಲಿ ವಕೀಲರು ಕಪ್ಪು ಕೋಟು ಧರಿಸಿ ವಾದ- ವಿವಾದಗಳಲ್ಲಿ ಪಾಲ್ಗೊಳ್ಳುವುದು ಅತ್ಯಂತ ಕಷ್ಟ ಕೆಲಸ ಆದ ಕಾರಣ ಈ ವಿನಾಯಿತಿ ನೀಡುವಂತೆ ಮನವಿಯಲ್ಲಿ ಹೇಳಲಾಗಿದೆ. ಈ ಮನವಿಯಲ್ಲಿ ಮತ್ತೊಂದು ಅಂಶವನ್ನು ಸೇರಿಸಲಾಗಿದ್ದು ರಾಜ್ಯ ಬಾರ್ ಕೌನ್ಸಿಲ್ಗಳಿಗೆ ತಮ್ಮ ನಿಯಮಗಳನ್ನು ತಿದ್ದುಪಡಿ ಮಾಡಲು ಮತ್ತು ವಕೀಲರಿಗೆ ಕಪ್ಪು ಕೋಟುಗಳು ಮತ್ತು ನಿಲುವಂಗಿಗಳನ್ನು ಧರಿಸುವುದರಿಂದ ವಿನಾಯಿತಿ ನೀಡುವ ಕಾಲಾವಧಿಯನ್ನು ನಿರ್ಧರಿಸಲು ನಿರ್ದೇಶನ ನೀಡಬೇಕೆಂದು ಕೋರಿದೆ.
ವಕೀಲ ಶೈಲೇಂದ್ರ ಮಣಿ ತ್ರಿಪಾಠಿ ಅವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ. ಬೇಸಿಗೆಯಲ್ಲಿ ಕೋಟುಗಳನ್ನು ಧರಿಸುವುದರಿಂದ ವಕೀಲರು ಒಂದು ನ್ಯಾಯಾಲಯದಿಂದ ಇನ್ನೊಂದು ನ್ಯಾಯಾಲಯಕ್ಕೆ ಹೋಗುವುದು ಕಷ್ಟವಾಗುತ್ತದೆ. ಬಿರು ಬೇಸಿಗೆಯಲ್ಲಿ ಕಪ್ಪು ಕೋಟು ಇಲ್ಲದ ಯಾತನೆ ನೀಡುತ್ತದೆ. ಆದ ಕಾರಣ ಈ ವಿನಾಯಿತಿಗೆ ಘನ ನ್ಯಾಯಲಯ ಸೂಚಿಸಬೇಕಾಗಿ ಕೇಳಲಾಗಿದೆ.
ವಕೀಲರ ಡ್ರೆಸ್ ಕೋಡ್ ಅನ್ನು ವಕೀಲರ ಕಾಯಿದೆ 1961 ರ ಅಡಿಯಲ್ಲಿ ಬಾರ್ ಕೌನ್ಸಿಲ್ ಆಫ್ ಇಂಡಿಯಾ ನಿಯಮಗಳ ಮೂಲಕ ನಿಯಂತ್ರಿಸಲಾಗುತ್ತದೆ ಮತ್ತು ವಕೀಲರು ಬಿಳಿ ಅಂಗಿ ಮತ್ತು ಬಿಳಿ ಕುತ್ತಿಗೆ ಪಟ್ಟಿಯೊಂದಿಗೆ ಕಪ್ಪು ಕೋಟ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ನಿಯಮಗಳ ಪ್ರಕಾರ, ವಕೀಲರು ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ನಲ್ಲಿ ಹಾಜರಾಗುವಾಗ ಈ ಡ್ರೆಸ್ ಕೋಡ್ಅನ್ನು ಪಾಲಿಸಲೇ ಬೇಕು ಹಾಗೂ  ವಕೀಲರ ಗೌನ್ ಧರಿಸುವುದು ಅವರವರ ಇಷ್ಟಕ್ಕೆ ಬಿಟ್ಟ ವಿಚಾರ ಎಂದೂ ಹೇಳಲಾಗಿದೆ.
ಭಾರತದ ಅನೇಕ ರಾಜ್ಯಗಳಲ್ಲಿ ಬೇಸಿಗೆಯ ಕಾವು ಅತ್ಯಂತ ಪ್ರಖರವಾದ ಮಟ್ಟದಲ್ಲಿ ಜನವರಿ ತಿಂಗಳ ಅಂತ್ಯದಿಂದ ಪ್ರಾರಂಭಾಗುತ್ತದೆ. ಆಗ ಅನೇಕ ರಾಜ್ಯಗಳು ಈ ಬೇಸಿಗೆಗೆ ನಲುಗುವುದಂತೂ ಅಕ್ಚರಶಃ ಸತ್ಯ ಆದ ಕಾರಣ ಈ ಮನವಿಯನ್ನು ಸಲ್ಲಿಸಲಾಗಿದೆ. ಅಲ್ಲದೇ ಕಪ್ಪು ಕೋಟು ಹೆಚ್ಚು ಬಿಸಿಯನ್ನು ಹೀರುವ ಕಾರಣ ಸಾಕಷ್ಟು ಕಿರಿಕಿರಿಗೆ ಇದು ಕಾರಣವಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದಲ್ಲಿ ಮುಂದುವರೆದ ಮಳೆ; ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್