Select Your Language

Notifications

webdunia
webdunia
webdunia
webdunia

ಹೆಣ್ಣು ಮಗು ಹಡೆದಿದ್ದಕ್ಕೆ ಪತ್ನಿಯನ್ನೇ ಕೊಂದ ಭೂಪ

ಹೆಣ್ಣು ಮಗು ಹಡೆದಿದ್ದಕ್ಕೆ ಪತ್ನಿಯನ್ನೇ ಕೊಂದ ಭೂಪ
ಮುಂಬೈ , ಸೋಮವಾರ, 30 ಆಗಸ್ಟ್ 2021 (09:10 IST)
ಮುಂಬೈ: ಹೆಣ್ಣು ಮಗುವನ್ನು ಹೆತ್ತಿದ್ದಕ್ಕೆ ಮಡದಿಯನ್ನು ಪತಿ ಮಹಾಶಯನೊಬ್ಬ ಹತ್ಯೆ ಮಾಡಿದ ಹೇಯ ಕೃತ್ಯ ಮಹಾರಾಷ್ಟ್ರದಲ್ಲಿ ನಡೆದಿದೆ.


20 ವರ್ಷದ ಮಹಿಳೆ ಕೊಲೆಗೀಡಾದಾಕೆ. ಆಕೆಯನ್ನು ವೃತ್ತಿಯಲ್ಲಿ ಲಾರಿ ಚಾಲಕನಾಗಿರುವ 26 ವರ್ಷದ ಪತಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ. ಈ ಸಂಬಂಧ ಮಹಿಳೆಯ ತಂದೆ ಪೊಲೀಸರಿಗೆ ದೂರು ನೀಡಿದ್ದರು.

ಇದಕ್ಕೂ ಮೊದಲೇ ಪತ್ನಿ ಜೊತೆ ಆರೋಪಿ ಆಗಾಗ ತಗಾದೆ ತೆಗೆಯುತ್ತಿದ್ದ ಮತ್ತು ಆಕೆಗೆ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದ ಎಂದು ದೂರಿನಲ್ಲಿ ಹೇಳಲಾಗಿದೆ. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜನರ ಆಶೋತ್ತರ ಈಡೇರಿಸಿ: ಕೆ.ಎಸ್. ಈಶ್ವರಪ್ಪ