Select Your Language

Notifications

webdunia
webdunia
webdunia
webdunia

ಮದುವೆ ಮನೆಯಲ್ಲಿ ಲಕ್ಷಾಂತರ ಹಣ, ನಗದು ದರೋಡೆ

ಮದುವೆ ಮನೆಯಲ್ಲಿ ಲಕ್ಷಾಂತರ ಹಣ, ನಗದು ದರೋಡೆ
ಚಂಢೀಘಡ , ಶುಕ್ರವಾರ, 23 ಅಕ್ಟೋಬರ್ 2020 (11:32 IST)
ಚಂಢೀಘಡ: ಅದ್ಧೂರಿಯಾಗಿ ನಡೆಯುತ್ತಿದ್ದ ಮದುವೆ ಮನೆಯಲ್ಲಿ ದರೋಡೆ ನಡೆದು ಮದುವೆಯ ಸಂಭ್ರಮವೆಲ್ಲಾ ಮಣ್ಣು ಪಾಲಾದ ಘಟನೆ ಚಂಢೀಘಡದಲ್ಲಿ ನಡೆದಿದೆ.


ಚಂಢೀಘಡದ ಹೋಟೆಲ್ ಒಂದರಲ್ಲಿ ಮದುವೆ ಸಮಾರಂಭ ನಡೆಯುತ್ತಿತ್ತು. ಈ ವೇಳೆ ಯಾರೋ ದುಷ್ಕರ್ಮಿಗಳು ವಧುವಿನ ತಾಯಿಯ ಪರ್ಸ್ ನಲ್ಲಿ ವಧೂವರರಿಗೆ ಉಡುಗೊರೆಯಾಗಿ ನೀಡಲು ಇಟ್ಟಿದ್ದ 3 ಲಕ್ಷ ರೂ. ಮತ್ತು ವಜ್ರದ ಉಂಗುರ ಹಾಗೂ ಎರಡು ಮೊಬೈಲ್ ಫೋನ್ ಗಳನ್ನು ದರೋಡೆ ಮಾಡಲಾಗಿದೆ. ತಕ್ಷಣವೇ ಪೊಲೀಸರಿಗೆ ದೂರು ನೀಡಲಾಗಿದೆ. ಸಿಸಿಟಿವಿ ಪರಿಶೀಲಿಸಿರುವ ಪೊಲೀಸರಿಗೆ ಮುಸುಕುಧಾರಿಯೊಬ್ಬ ಅನುಮಾಸ್ಪದವಾಗಿ ಓಡಾಡಿದ್ದು ಕಂಡುಬಂದಿದೆ. ಈತನೇ ಈ ಕೃತ್ಯವೆಸಗಿರಬಹುದು ಎಂದು ಶಂಕಿಸಲಾಗಿದೆ. ಆರೋಪಿಗಾಗಿ ಹುಡುಕಾಟ ನಡೆದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಕ್ಷಣೆ ಹೆಸರಿನಲ್ಲಿ ಪೋಸ್ ಕೊಟ್ಟಿದ್ದ ಪಿಎಸ್ ಐ ಅಮಾನತು