Select Your Language

Notifications

webdunia
webdunia
webdunia
webdunia

ರಕ್ಷಣೆ ಹೆಸರಿನಲ್ಲಿ ಪೋಸ್ ಕೊಟ್ಟಿದ್ದ ಪಿಎಸ್ ಐ ಅಮಾನತು

ರಕ್ಷಣೆ ಹೆಸರಿನಲ್ಲಿ ಪೋಸ್ ಕೊಟ್ಟಿದ್ದ ಪಿಎಸ್ ಐ ಅಮಾನತು
ಬೆಂಗಳೂರು , ಶುಕ್ರವಾರ, 23 ಅಕ್ಟೋಬರ್ 2020 (10:38 IST)
ಬೆಂಗಳೂರು : ರಕ್ಷಣೆ ಹೆಸರಿನಲ್ಲಿ ಬಿಲ್ಡಪ್ ಕೊಟ್ಟಿದ್ದ ಜೇವರ್ಗಿ ತಾಲೂಕಿನ ನೆಲೋಗಿ ಠಾಣೆ ಪಿಎಸ್ ಐ ಮಲ್ಲನಗೌಡ ಯಲಗೋಡ ಅವರನ್ನು ಅಮಾನತು ಮಾಡಲಾಗಿದೆ.

ಪಿಎಸ್ ಐ ಮಲ್ಲನಗೌಡ ಯಲಗೋಡ ನೆರೆ ಸಂತ್ರಸ್ತರ ಜತೆ ತೆಪ್ಪದ ಮೇಲೆ ನಿಂತು ಬಿಲ್ಡಪ್ ಕೊಡುತ್ತಿದ್ದರು . ಮೇಕೆಮರಿ ಹಿಡಿದುಕೊಂಡು ಪಿಎಸ್ ಐ ಪೋಸ್ ಕೊಟ್ಟಿದ್ದಾರೆ. ವಿಡಿಯೋ ಮಾಡಿಸಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ಅದು ವೈರಲ್ ಆಗಿದೆ.

ಈ ಹಿನ್ನಲೆಯಲ್ಲಿ ಕಲಬುರಗಿ ಎಸ್ ಪಿ ಡಾ.ಸಿಮಿ ಮರಿಯಾ ಜಾರ್ಜ್ ಅವರು ಜನಕಷ್ಟದಲ್ಲಿದ್ದಾಗ ಈ ರೀತಿ ಮಾಡಿದ್ದು ತಪ್ಪು ಎಂದು ಪಿಎಸ್ ಐ ಮಲ್ಲನಗೌಡ ಯಲಗೋಡ ಅವರನ್ನು ಅಮಾನತುಗೊಳಿಸುವಂತೆ ಆದೇಶಿಸಿದ್ದಾರೆ  ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಹಾರದ ವಿಧಾನಸಭಾ ಚುನಾವಣೆಯ ಹಿನ್ನಲೆ; ಇಂದು ಘಟಾನುಘಟಿ ನಾಯಕರಿಂದ ಪ್ರಚಾರ