Publish Date: Fri, 23 Oct 2020 (08:26 IST)
Updated Date: Fri, 23 Oct 2020 (08:27 IST)
ಬೆಂಗಳೂರು : ಈಗಾಗಲೇ ನವರಾತ್ರಿ ಆರಂಭವಾಗಿದ್ದು, ಯಾವುದೇ ಶುಭ ಕಾರ್ಯ ಮಾಡಲು ಇದು ಪ್ರಶಸ್ತವಾದ ದಿನ ಎನ್ನಲಾಗಿದೆ. ಆದಕಾರಣ ಈ ನವರಾತ್ರಿಯ ವೇಳೆ ಬೆಳಿಗ್ಗೆ ಈ ವಸ್ತುಗಳು ನಿಮ್ಮ ಕಣ್ಣಿಗೆ ಬಿದ್ದರೆ ನಿಮಗೆ ಅದೃಷ್ಟ ಒಲಿದುಬರುತ್ತದೆ.
ಬೆಳಿಗ್ಗೆ ಹಸುವಿನ ಹಾಲು ಕರೆಯುವ ದೃಶ್ಯ ಕಣ್ಣಿಗೆ ಬಿದ್ದರೆ ನಿಮಗೆ ಅದೃಷ್ಟ ಒಲಿದುಬರುತ್ತದೆ. ಬೆಳಿಗ್ಗೆ ಪಕ್ಷಿಗಳು ಕಣ್ಣಿಗೆ ಬಿದ್ದರೆ ಒಳ್ಳೆಯದು. ಹೋಮಹವನ ಮಾಡುವುದು ಕಾಣಿಸಿದರೆ ಉತ್ತಮ. ಹಾಗೇ ದೇವರಿಗೆ ಆರತಿ ಮಾಡುವುದು ಕಾಣಿಸುವುದು ಮತ್ತು ಗಂಟೆ ಶಬ್ಧ ಕೇಳಿಸಿದರೆ ಉತ್ತಮ ಎನ್ನಲಾಗಿದೆ. ಇದರಿಂದ ನಿಮಗೆ ಅದೃಷ್ಟ ಒಲಿದು ಜೀವನದಲ್ಲಿ ಮುಂದೆ ಉದ್ಧಾರವಾಗುತ್ತೀರಿ ಎನ್ನಲಾಗಿದೆ.