Publish Date: Fri, 12 Jan 2018 (17:52 IST)
Updated Date: Fri, 12 Jan 2018 (17:55 IST)
ಮಾಜಿ ಗೆಳತಿಗೆ ಯುವನೊಬ್ಬ ಬಲವಂತವಾಗಿ ಚುಂಬಿಸಿರುವ ಘಟನೆ ಮುಂಬೈನ ಬಾಂದ್ರಾದ ಕಾರ್ಟರ್ ರಸ್ತೆಯಲ್ಲಿ ನಡೆದಿದೆ.
ಮಂಗಳವಾರ ರಾತ್ರಿ ಯುವತಿ ತನ್ನ ಸ್ನೇಹಿತರ ಜೊತೆಯಿದ್ದಾಗ ಆರೋಪಿ ಏಕಾಏಕಿ ಯುವತಿಯ ಬಳಿಗೆ ಹೋಗಿ ಬಲವಂತಾಗಿ ಆಕೆಯನ್ನು ಚುಂಬಿಸಿದ್ದಾನೆ. ಅಲ್ಲೇ ಇದ್ದ ಯುತಿಯ ಸ್ನೇಹಿತರು ತಡೆಯಲು ಪ್ರಯತ್ನ ಮಾಡಿದ್ದಾರೆ. ಆದರೆ ಆರೋಪಿ ಅಸಭ್ಯವಾಗಿ ವರ್ತಿಸಿ ಯುವತಿಗೆ ಬಲವಂತದಿಂದ ಚುಂಬಿಸಿದ್ದಾನೆ.
ನಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ನ್ಯಾಯಾಲಯ ಎರಡು ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಆರೋಪಿ ಹಾಗೂ ಯುವತಿ ಒಂದು ವರ್ಷದಿಂದ ದೂರವಾಗಿದ್ದು, ಆರೋಪಿ ಯುವತಿಯನ್ನು ಮತ್ತೆ ಮತ್ತೆ ಸಂಪರ್ಕಿಸಿ ಮಾತನಾಡಲು ಪ್ರಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.