Publish Date: Tue, 09 Jan 2018 (12:51 IST)
Updated Date: Tue, 09 Jan 2018 (12:59 IST)
ಚಿಕ್ಕಮಗಳೂರು : ಮೂಡಿಗೆರೆಯಲ್ಲಿ ಧನ್ಯ ಆತ್ಮಹತ್ಯೆ ಮಾಡಿಕೊಂಡ ಕೇಸ್ ಹಿಂದೆ ಮತ್ತೊಂದು ಎಚ್ಚರಿಕೆ ಸಂದೇಶವನ್ನು ಭಜರಂಗದಳದ ಕಾರ್ಯಕರ್ತರು ಹರಿಬಿಟ್ಟಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.
‘’ಅನ್ಯ ಧರ್ಮದ ಯುವಕರ ಜೊತೆ ಕಾಣಿಸಿಕೊಂಡರೆ ಧರ್ಮದೇಟು ಬೀಳುತ್ತದೆ. ಹಿಂದೂ ಯುವತಿಯರಿಗೆ ಇದು ಕೊನೆಯ ಎಚ್ಚರಿಕೆ. ನಮಗೆ ಹಿಂದೂ ಧರ್ಮ ಮುಖ್ಯ . ಧರ್ಮದ ರಕ್ಷಣೆ ನಮ್ಮೆಲ್ಲರ ಕರ್ತವ್ಯ.’’ ಎಂದು ಮೂಡಿಗೆರೆ ಭಜರಂಗದಳದ ಹೆಸರಿನಲ್ಲಿ ಸಂದೇಶಗಳು ರವಾನೆಯಾಗಿದೆ. ವಾಟ್ಸಾಪ್ , ಸಾಮಾಜಿಕ ಜಾಲತಾಣಗಳಲ್ಲಿ ಈ ಮೇಸೆಜ್ ವೈರಲ್ ಆಗಿದ್ದು, ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಈ ಎಚ್ಚರಿಕೆ ಸಂದೇಶ ರವಾನೆಯಾಗುತ್ತಿದೆ ಎಂದು ತಿಳಿದು ಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ