Select Your Language

Notifications

webdunia
webdunia
webdunia
webdunia

ಅಮಿತ್ ಶಾ ಅವರ ಯಾವ ತಂತ್ರವೂ, ರಣ ತಂತ್ರವೂ ಇಲ್ಲಿ ನಡೆಯೋದಿಲ್ಲ-ಸಿಎಂ ಸಿದ್ದರಾಮಯ್ಯ

ಅಮಿತ್ ಶಾ
ಉಡುಪಿ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಚುನಾವಣೆ ಸೋಲಿನ ಭಯ ಶುರುವಾಗಿದೆ ಎಂದು ಉಡುಪಿಯ ಉಪ್ಪೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

 
‘ಉಪಚುನಾವಣೆ ಫಲಿತಾಂಶದ ಬಳಿಕ ಬಿಜೆಪಿಗೆ ಸೋಲಿನ ಭಯ ಕಾಡುತ್ತಿದೆ. ಅಮಿತ್ ಶಾ ಅವರ ಯಾವ ತಂತ್ರವೂ, ರಣ ತಂತ್ರವೂ ಇಲ್ಲಿ ನಡೆಯೋದಿಲ್ಲ. ಕರ್ನಾಟಕದ ಪ್ರಬುದ್ಧ ಮತದಾರರು ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ. ಕಾಂಗ್ರೆಸ್ ಮುಖಂಡರ ಮೇಲಿನ ಐಟಿ ದಾಳಿ ರಾಜಕೀಯ ಪ್ರೇರಿತ. ನಮ್ಮ ಆಪ್ತರನ್ನು ಹುಡುಕಿ, ಹುಡುಕಿ ಐಟಿ ದಾಳಿ ಮಾಡಿಸುತ್ತಿದ್ದಾರೆ. ಶಿವಣ್ಣ ಮನೆ ಮೇಲೂ ರಾಜಕೀಯ ದುರುದ್ದೇಶದಿಂದ ದಾಳಿ ನಡೆಸಲಾಗಿದೆ’ ಎಂದು ಸಿಎಂ ಸಿದ್ದರಾಮಯ್ಯ ಅವರು  ಉಡುಪಿಯ ಉಪ್ಪೂರಿನಲ್ಲಿ ಹೇಳಿಕೆ ನೀಡಿದ್ದಾರೆ.

 
‘ಪ್ರಧಾನಿ ನರೇಂದ್ರ ಮೋದಿ ಯಾರ ದುಡ್ಡಲ್ಲಿ ವಿದೇಶ ಸುತ್ತುತ್ತಿದ್ದಾರೆ. ನಾವೂ ಸಹ ಸರ್ಕಾರಿ ಕಾರ್ಯಕ್ರಮಕ್ಕೆ ರಾಜ್ಯದಲ್ಲಿ ಓಡಾಡುತ್ತಿದ್ದೇವೆ’ ಎಂದು ಸರ್ಕಾರಿ ಹಣದಲ್ಲಿ ಸಮಾವೇಶ ಮಾಡುತ್ತಾರೆಂಬ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಹರೈನ್ ನಲ್ಲಿ ಸಿಎಂ ಸಿದ್ದರಾಮಯ್ಯ ಹೊಗಳಿದ ರಾಹುಲ್ ಗಾಂಧಿ