Select Your Language

Notifications

webdunia
webdunia
webdunia
webdunia

ರಾಜಕೀಯಕ್ಕೆ ಎಂಟ್ರಿ ಕೊಡಲಿರುವ ಸ್ಯಾಂಡಲ್ ವುಡ್ ನ ಮತ್ತೊಬ್ಬ ನಟ

ರಾಜಕೀಯಕ್ಕೆ ಎಂಟ್ರಿ ಕೊಡಲಿರುವ ಸ್ಯಾಂಡಲ್ ವುಡ್ ನ ಮತ್ತೊಬ್ಬ ನಟ
ಬೆಂಗಳೂರು , ಮಂಗಳವಾರ, 9 ಜನವರಿ 2018 (10:15 IST)
ಬೆಂಗಳೂರು : ಇತ್ತೀಚೆಗೆ ಸ್ಯಾಂಡಲ್ ವುಡ್ ನಟ-ನಟಿಯರು ರಾಜಕೀಯಕ್ಕೆ ಇಳಿಯುತ್ತಿರುವುದರ ಬಗ್ಗೆ ಸುದ್ದಿಯಾಗುತ್ತಿದ್ದು, ಈಗ ಮತ್ತೊಬ್ಬ ನಟ ರಾಜಕೀಯದತ್ತ ಮುಖಮಾಡಿರುವುದಾಗಿ ತಿಳಿದುಬಂದಿದೆ.

 
ಹಿಂದೆ ಚಿತ್ರದುರ್ಗ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿ ನಂತರ ರಾಜಕಾರಣ ಜೀವನದಿಂದ ದೂರಾದ ನಟ ಶಶಿಕುಮಾರ್ ಅವರು ಈಗ ಮತ್ತೆ ರಾಜಕೀಯದ ಕಣಕ್ಕೆ ಇಳಿಯುತ್ತಿದ್ದಾರಂತೆ. ಮುಂದೆ ಬರುವ ವಿಧಾನಸಭೆ ಚುನಾವಣೆಯಲ್ಲಿ ಶಶಿಕುಮಾರ್ ಚಿತ್ರದುರ್ಗ ಜಿಲ್ಲೆಯ ಕ್ಷೇತ್ರವೊಂದರಿಂದ ಸ್ಪರ್ಧಿಸಲಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು ‘ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಮೊಳಕಾಲ್ಮೂರು ಅಥವಾ ಚಳ್ಳಕೆರೆ ಕ್ಷೇತ್ರದಿಂದ ಸ್ಪರ್ಧಿಸುವೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದೇನೆ. ಸಾಧನಾಸಮಾವೇಶದ ಬಳಿಕ ತಿರ್ಮಾನ ಮಾಡುವುದಾಗಿ ಸಿ.ಎಂ.ತಿಳಿಸಿದ್ದಾರೆ’ ಎಂದು ಶಶಿಕುಮಾರ್ ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಜಗನ್ ಹೋಗಿದ್ದೆಲ್ಲಿಗೆ?