Publish Date: Mon, 01 Jan 2018 (10:41 IST)
Updated Date: Mon, 01 Jan 2018 (10:44 IST)
ಚೆನ್ನೈ: ರಜನೀಕಾಂತ್ ಜೋಕ್ ಗಳು ನಮ್ಮಲ್ಲಿ ಎಷ್ಟು ಜನಪ್ರಿಯ ಎಂಬುದು ಎಲ್ಲರಿಗೂ ಗೊತ್ತೇ ಇದೆ. ರಜನೀಕಾಂತ್ ಸಿನಿಮಾ ಮಾಡಿದಾಗಲೆಲ್ಲಾ ಇಂತಹ ಜೋಕ್ ಗಳು ಹುಟ್ಟಿಕೊಳ್ಳುತ್ತವೆ. ಇದೀಗ ರಜನಿ ರಾಜಕೀಯಕ್ಕೆ ಪ್ರವೇಶಿಸಿದ ಹಿನ್ನಲೆಯಲ್ಲೂ ಅಭಿಮಾನಿಗಳು ಹೊಸ ಜೋಕ್ ಹುಟ್ಟು ಹಾಕಿದ್ದಾರೆ.
ಅದರ ಕೆಲವು ಝಲಕ್ ಗಳು ಇಲ್ಲಿವೆ ನೋಡಿ..
· ರಜನೀಕಾಂತ್ ರಾಜಕೀಯಕ್ಕೆ ಪ್ರವೇಶಿಸಿಲ್ಲ. ರಾಜಕೀಯವೇ ರಜನಿ ಬಳಿಗೆ ಬಂದಿದೆ..!
· ರಜನಿ ರಾಜಕೀಯಕ್ಕೆ ಬಂದಿದ್ದನ್ನು ನೋಡಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ರಜೆ ಪಡೆದು ಮಾಯವಾಗಿದ್ದಾರೆ
· ಒಮ್ಮೆ ಬ್ಯಾಟ್ ಮ್ಯಾನ್, ಸೂಪರ್ ಮ್ಯಾನ್, ಐರನ್ ಮ್ಯಾನ್ ರಜನಿ ಮನೆಗೆ ಬಂದಿದ್ದು ಆ ದಿವನ ಟೀಚರ್ಸ್ ದಿನವಾಗಿತ್ತು. ಈಗ ರಜನೀಕಾಂತ್ ರಾಜಕೀಯಕ್ಕೆ ಬಂದಿದ್ದಾರೆ. ಇದು ರಾಜಕಾರಣಿಗಳಿಗೇ ಪಾಠ ಕಲಿಸುವ ದಿನ.
ಮುಂದಿನ ದಿನಗಳಲ್ಲಿ ಇನ್ನಷ್ಟು ನಿರೀಕ್ಷಿಸಬಹುದು!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ