Daily Horoscope

Select Your Language

Notifications

webdunia
webdunia
webdunia
webdunia

ಮದುವೆಯಾಗ್ತಿನಿ ಎಂದ, ಪ್ರತಿರಾತ್ರಿ ಮುಕ್ಕಿ ತಿಂದ, ನಂತ್ರ ಬ್ಲ್ಯಾಕ್‌ಮೇಲ್‌ ಮಾಡ್ದ

ಯುವಕ
ನಾನು ನಿನ್ನನ್ನು ಪ್ರೀತಿಸ್ತೀನಿ ನನ್ನ ನಂಬು ಪ್ಲೀಸ್ ಎಂದ. ಆತನ ಮಾತಿಗೆ ಮರುಳಾದ ಯುವತಿ ಇದೀಗ ಗರ್ಭಿಣಿಯಾಗಿ ಪೊಲೀಸ್ ಠಾಣೆಗಳಿಗೆ ಅಲೆಯುತ್ತಿರುವ ಹೇಯ ಘಟನೆ ವರದಿಯಾಗಿದೆ. 
ಪ್ರೀತಿಯ ನೆಪದಲ್ಲಿ ಯುವತಿಯೊಂದಿಗೆ ರಾತ್ರಿಯೆಲ್ಲಾ ಲೈಂಗಿಕ ಕೃತ್ಯದಲ್ಲಿ ತೊಡಗಿದ್ದಲ್ಲದೇ ಅದನ್ನು ವಿಡಿಯೋ ಮಾಡಿ ನಂತರ ನಾನು ಹೇಳಿದ್ದು ಕೇಳದಿದ್ದಲ್ಲಿ ವಿಡಿಯೋಗಳನ್ನು ಇಂಟರ್‌ನೆಟ್‌ನಲ್ಲಿ ಹಾಕುವ ಬೆದರಿಕೆಯೊಡ್ಡಿದ್ದಾನೆ. ಸುಮಾರು ಒಂದು ವರ್ಷಗಳ ಕಾಲ ಆತನ ಅತ್ಯಾಚಾರ ಸಹಿಸಿದ ಯುವತಿ ಇದೀಗ ಪೊಲೀಸರ ಮೊರೆಹೋಗಿದ್ದಾಳೆ.
 
ಯಾವತ್ತಿದ್ದರೂ ನಾನೇ ನಿನ್ನ ಗಂಡ ಎನ್ನುತ್ತಲೇ ಯುವತಿಯ ಯವ್ವನವನ್ನು ಸೂರೆಗೊಂಡ ಆರೋಪಿ, ನಂತರ ಮದುವೆಯೂ ಇಲ್ಲ, ಪ್ರೀತಿಯೂ ಇಲ್ಲ ಎಂದು ಕೈ ಜಾಡಿಸಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ದಾಖಲಿಸಿದ್ದಾಳೆ.
 
ಆಕೆಯ ಅಶ್ಲೀಲ ವಿಡಿಯೋ ನನ್ನ ಬಳಿಯಿರುವುದರಿಂದ ಆಕೆ ಪೊಲೀಸ್ ಠಾಣೆಗೆ ದೂರು ನೀಡುವುದಿಲ್ಲ ಎನ್ನುವ ನಂಬಿಕೆಯಲ್ಲಿದ್ದ ಆರೋಪಿಗೆ ಆಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವುದು ತಿಳಿಯುತ್ತಿದ್ದಂತೆ ಎಸ್ಕೇಪ್ ಆಗಿದ್ದಾನೆ.
 
ಆರೋಪಿ ಮತ್ತು ಆತನ ಪರಿವಾರದವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಶೀಘ್ರದಲ್ಲಿಯೇ ಆರೋಪಿಯನ್ನು ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕರಾವಳಿ ತೀರದ ಹಿಂಸಾಚಾರದಲ್ಲಿ ಕಾಂಗ್ರೆಸ್, ಬಿಜೆಪಿ ಕೈವಾಡ: ಕುಮಾರಸ್ವಾಮಿ