Webdunia - Bharat's app for daily news and videos

Install App

ತಾಯಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲವೆಂದು ವೈದ್ಯನ ಮೇಲೆ ಮಗ ಇದ್ದಕ್ಕಿದ್ದ ಹಾಗೇ ಮಾಡಿದ್ದೇನು

Sampriya
ಬುಧವಾರ, 13 ನವೆಂಬರ್ 2024 (18:49 IST)
ಪೆರುಂಗಲತ್ತೂರು; ತಾಯಿಗೆ ಸರಿಯಾಗಿ ಚಿಕಿತ್ಸೆ ನೀಡಿಲ್ಲವೆಂದು ಕೋಪಗೊಂಡ ಮಗ ವೈದ್ಯನಿಗೆ ಚಾಕುವಿನಿಂದ ಇರಿದು ಗಂಭೀರ ಹಲ್ಲೆ ನಡೆಸಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.

ಗಂಬೀರವಾಗಿ ಹಲ್ಲೆಗೊಳಗಾದ ವೈದ್ಯರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  ಪೊಲೀಸರ ಪ್ರಕಾರ ದಾಳಿಕೋರ ವಿಘ್ನೇಶ್ ಮತ್ತು ಆತನ ಸಹಚರರಲ್ಲಿ ಒಬ್ಬನನ್ನು ಬಂಧಿಸಲಾಗಿದೆ.

ವಿಘ್ನೇಶ್ ತಾಯಿ ಪ್ರೇಮಾ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ.  ಪ್ರೇಮಾ ಸ್ಥಿತಿ ಗಂಭೀರವಾಗಿದ್ದು, ಈ ವಿಚಾರ ಸಲುವಾಗಿ ವೈದ್ಯರ ಜತೆ ವಿಘ್ನೇಶ್ ವಾಗ್ವಾದಕ್ಕೆ ಇಳಿದಿದ್ದಾನೆ.  ಕೆಲ ಕಾಲ ವಾಗ್ವಾದದ ನಂತರ ಕೋಪಗೊಂಡ ವಿಘ್ನೇಶ್ ಚಾಕು ತೆಗೆದು ವೈದ್ಯರ ಕುತ್ತಿಗೆಗೆ ಇರಿದಿದ್ದಾನೆ.

ಅಲ್ಲಿದ್ದ ಜನರು ಕೂಡಲೇ ವೈದ್ಯರಿಗೆ ಸಹಾಯ ಮಾಡಲು ಓಡಿ ಬಂದರು, ಅವರನ್ನು ಐಸಿಯುಗೆ ಕರೆದೊಯ್ದರು. ದಾಳಿಯ ನಂತರ ಆರೋಪಿ ಪರಾರಿಯಾಗಲು ಯತ್ನಿಸಿದ್ದು ಭದ್ರತಾ ಸಿಬ್ಬಂದಿ ಹಾಗೂ ಆಸ್ಪತ್ರೆ ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದಾನೆ.

ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಕೂಡ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಕಲೈಂಜರ್ ಸೆಂಟಿನರಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯರ ಮೇಲೆ ಹಲ್ಲೆ ನಡೆಸಿರುವುದು ಆಘಾತಕಾರಿ ಸಂಗತಿಯಾಗಿದೆ. ಈ ಬಗ್ಗೆ ಕೂಲಂಕುಷ ತನಿಖೆ ನಡೆಸಿ ಅಗತ್ಯ ಚಿಕಿತ್ಸೆಗೆ ಆದೇಶಿಸಿದ್ದೇನೆ ಎಂದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Suhas Shetty Murder: ತನಿಖೆಯಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಗೃಹ ಸಚಿವಾಲಯದ ಆದೇಶದಲ್ಲೇನಿದೆ

ರೇಣುಕಾಸ್ವಾಮಿ ತಂದೆ ಕಣ್ಣೀರು: ಮಾನವೀಯತೆಯಿಂದಾದ್ರೂ ಸೊಸೆಗೆ ಸರ್ಕಾರಿ ನೌಕರಿ ಕೊಡಿಸಿ

ಯಡಿಯೂರಪ್ಪ ಮನೆ ಮದುವೆಯಲ್ಲಿ ಸಿದ್ದರಾಮಯ್ಯ: ಒಳಗೊಳಗೆ ಎಲ್ಲಾ ಚೆನ್ನಾಗೇ ಇರ್ತೀರಾ ನೆಟ್ಟಿಗರ ಟಾಂಗ್

Suhas Shetty: ಸುಹಾಸ್ ಶೆಟ್ಟಿ ಕೇಸ್ ಎನ್ಐಎಗೆ ವಹಿಸಿದ ಕೇಂದ್ರ: ಕರಾವಳಿಯ ಹತ್ಯಾಕಾಂಡಗಳೆಲ್ಲಾ ಬಯಲಾಗುತ್ತಾ

Bengaluru Stampede: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

ಮುಂದಿನ ಸುದ್ದಿ
Show comments