Select Your Language

Notifications

webdunia
webdunia
webdunia
webdunia

ವೃತ್ತಿ ಜೀವನದ ಕೊನೆಯ ದಿನ ಮರೆಯಲಾಗದ ತೀರ್ಪು ಕೊಟ್ಟ ಸುಪ್ರೀಂಕೋರ್ಟ್ ಜಸ್ಟಿಸ್ ಚಂದ್ರಚೂಡ್

Justice Chandrachud

Krishnaveni K

ನವದೆಹಲಿ , ಮಂಗಳವಾರ, 12 ನವೆಂಬರ್ 2024 (16:27 IST)
Photo Credit: X
ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಹುದ್ದೆಯಿಂದ ನಿವೃತ್ತಿಯಾಗುವ ಮೊದಲು ಜಸ್ಟಿಸ್ ಡಿವೈ ಚಂದ್ರಚೂಡ್ ಮರೆಯಲಾಗದ ತೀರ್ಪು ಕೊಟ್ಟು ನಿರ್ಗಮಿಸಿದ್ದಾರೆ.

ಉತ್ತರ ಪ್ರದೇಶದ 62 ವರ್ಷದ ಅಶೋಕ್ ರಾಣ ಮತ್ತು ಅವರ ಪತ್ನಿ, 55 ವರ್ಷದ ನಿರ್ಮಲಾ ದೇವಿ ತಮ್ಮ ಅನಾರೋಗ್ಯ ಪೀಡಿತ ಮಗನಿಗೆ ದಯಾಮರಣಕ್ಕೆ ಅವಕಾಶ ನಿಡುವಂತೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ತಲೆಗೆ ಗಂಭೀರ ಪೆಟ್ಟು ಬಿದ್ದ ಕಾರಣ ಕಳೆದ 12 ವರ್ಷಗಳಿಂದ ಮಗ ಜೀವಂತ ಶವವಾಗಿದ್ದಾನೆ.

ಆತನ ಖರ್ಚು ವೆಚ್ಚಗಳನ್ನು ನೋಡಿಕೊಳ್ಳಲು ಆರ್ಥಿಕವಾಗಿ ನಾವು ಶಕ್ತರಾಗಿಲ್ಲ. ಜೊತೆಗೆ ಆತನೂ ಅತ್ತ ಸಾಯಲೂ ಆಗದೇ ಇತ್ತ ಬದುಕಲೂ ಆಗದೇ ಹೋರಾಟ ನಡೆಸುತ್ತಲೇ ಬಂದಿದ್ದಾನೆ. ಹೀಗಾಗಿ ಆತನಿಗೆ ನೀಡಿರುವ ಜೀವ ರಕ್ಷಕ ಸಾಧನವನ್ನು ತೆಗೆದು ದಯಾಮರಣ ನೀಡಲು ಅವಕಾಶ ನೀಡಬೇಕು ಎಂದು ವೃದ್ಧ ದಂಪತಿ ಕೋರ್ಟ್ ಮೊರೆ ಹೋಗಿದ್ದರು.

ತಮ್ಮ ವೃತ್ತಿ ಜೀವನದಲ್ಲಿ ಈ ಅಪರೂಪದ ಕೇಸ್ ತೀರ್ಪು ನೀಡಿದ ಜಸ್ಟಿಸ್ ಚಂದ್ರಚೂಡ್ ಈ ವೃದ್ಧ ದಂಪತಿಗೆ ಮಗನಿಗೆ ಚಿಕಿತ್ಸೆ ಕೊಡಿಸಲು ಉತ್ತರ ಪ್ರದೇಶ ಸರ್ಕಾರದಿಂದಲೇ ಸಹಾಯ ಮಾಡಿಕೊಡಲು ಆದೇಶ ನೀಡಿದ್ದಾರೆ. ಇದರಿಂದಾಗಿ ಸರ್ಕಾರವೇ ಆತನ ವೈದ್ಯಕೀಯ ವೆಚ್ಚವನ್ನು ಭರಿಸಲಿದೆ. ಒಂದು ವೇಳೆ ಮನೆಯಲ್ಲಿಯೇ ಚಿಕಿತ್ಸೆ ನೀಡಲು ಕಷ್ಟವಾದರೆ ಆತನನ್ನು ನೋಯ್ಡಾದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲೂ ಜಸ್ಟಿಸ್ ಚಂದ್ರಚೂಡ್ ಆದೇಶ ನೀಡಿದ್ದಾರೆ. ಅವರ ಈ ತೀರ್ಪಿನಿಂದಾಗಿ ವೃದ್ಧ ದಂಪತಿ ಕೊಂಚ ಸಮಾಧಾನ ಪಡುವಂತಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಂಬೇಡ್ಕರ್ ಇಸ್ಲಾಂ ಧರ್ಮ ಸ್ವೀಕರಿಸಲು ಮುಂದಾಗಿದ್ರು: ಕಾಂಗ್ರೆಸ್‌ ನಾಯಕನ ಹೇಳಿಕೆಗೆ ಆರ್‌ ಅಶೋಕ್‌ ಖಂಡನೆ