Select Your Language

Notifications

webdunia
webdunia
webdunia
webdunia

ನಟ ದರ್ಶನ್‌ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೋಗಲು ಖಾಕಿ ಪ್ಲ್ಯಾನ್

Actor Darshan Thugudeepa

sampriya

ಬೆಂಗಳೂರು , ಗುರುವಾರ, 31 ಅಕ್ಟೋಬರ್ 2024 (15:20 IST)
ಬೆಂಗಳೂರು: ಮಧ್ಯಂತರ ಜಾಮೀನು ಅಡಿಯಲಿ ಬಿಡುಗಡೆಯಾದ ನಟ ದರ್ಶನ್‌ಗೆ ಬಿಗ್‌ ಶಾಕಿಂಗ್‌ ನ್ಯೂಸ್‌ವೊಂದು ಎದುರಾಗಿದೆ.‌

ತೀವ್ರ ಬೆನ್ನುನೋವಿನ ಹಿನ್ನೆಲೆ ಚಿಕಿತ್ಸೆ ಸಲುವಾಗಿ ನೀಡಿದ ಮಧ್ಯಂತರ ಜಾಮೀನು ಪ್ರಶ್ನಿಸಿ ಪೊಲೀಸರು ಸುಪ್ರೀಂಕೋರ್ಟ್‌ ಮೊರೆ ಹೋಗಲು ಸಿದ್ಧತೆ ನಡೆಸಿದ್ದಾರೆಂಬ ಮಾಹಿತಿ ತಿಳಿದುಬಂದಿದೆ.

ಈ ಸಂಬಂಧ ಪೊಲೀಸರು ಸಭೆ ನಡೆಸಿದ್ದಾರೆಂಬ ವಿಚಾರ ಮೂಲಗಳಿಂದ ತಿಳಿದುಬಂದಿದೆ. ಸೋಮವಾರ ಕಾನೂನು ತಜ್ಞರ ಅಭಿಪ್ರಾಯ ಪಡೆದು ಹಿರಿಯ ಪೊಲೀಸ್‌ ಅಧಿಕಾರಿಗಳು ಈ ಕುರಿತು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ಗೆ ೧೩೧ ದಿನಗಳ ಬಳಿಕ ಷರತ್ತು ಬದ್ಧ ಮಧ್ಯಂತರ ಜಾಮೀನು ಮಂಜೂರಾಗಿದೆ. ಸದ್ಯ ದರ್ಶನ್‌ ಪತ್ನಿ ಅಪಾರ್ಟ್‌ಮೆಂಟ್‌ನಲ್ಲಿ ಕುಟುಂಬದವರ ಜತೆ ಕಾಲ ಕಳೆಯುತ್ತಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

1 ವರ್ಷದಿಂದ ಮಾನಸಿಕವಾಗಿ ಕುಗ್ಗಿದ ನನಗೆ ಇವರೇ ಧೈರ್ಯ ತುಂಬಿದ್ದು: ಶ್ರೀದೇವಿ ಬೈರಪ್ಪ ಪೋಸ್ಟ್‌