Select Your Language

Notifications

webdunia
webdunia
webdunia
webdunia

ಕಾಲಾ ಕುಮಾರಸ್ವಾಮಿ ಎಂಬ ಜಮೀರ್‌ ಅಹ್ಮದ್ ಹೇಳಿಕೆಗೆ ಸಚಿವ ಕಿರಣ್‌ ರಿಜಿಜು ಆಕ್ರೋಶ

Central Minister Kiran Rijiju, Central Minister HD Kumaraswamy, Karnataka Minister Zameer Ahmad

Sampriya

ನವದೆಹಲಿ , ಸೋಮವಾರ, 11 ನವೆಂಬರ್ 2024 (17:51 IST)
Photo Courtesy X
ನವದೆಹಲಿ: ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರನ್ನು ಗುರಿಯಾಗಿಸಿಕೊಂಡು 'ಜನಾಂಗೀಯ ಟೀಕೆ' ಮಾಡಿದ್ದಕ್ಕಾಗಿ ಕರ್ನಾಟಕದ ಕಾಂಗ್ರೆಸ್ ಸಚಿವ ಜಮೀರ್ ಅಹ್ಮದ್ ಅವರನ್ನು ಕೇಂದ್ರ ಸಚಿವ ಕಿರಣ್ ರಿಜಿಜು ಸೋಮವಾರ ತರಾಟೆಗೆ ತೆಗೆದುಕೊಂಡಿದ್ದಾರೆ.

ಚನ್ನಪಟ್ಟಣ ಉಪಚುನಾವಣೆಯ ಪ್ರಚಾರದ ವೇಳೆ ಸಚಿವ ಜಮೀರ್ ಅಹ್ಮದ್ ಅವರು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರನ್ನು 'ಕಾಲಿಯ' ಎಂದು ಕರೆಯುವ ಮೂಲಕ ವಿವಾದವನ್ನು ಹುಟ್ಟುಹಾಕಿದರು.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ   ಸಚಿವ ಕಿರಣ್ ರಿಜುಜು ಅವರು ಆಕ್ರೋಶ ಹೊರಹಾಕಿದ್ದಾರೆ.

"ಕಾಂಗ್ರೆಸ್ ಸಚಿವ ಜಮೀರ್ ಅಹ್ಮದ್ ಅವರು ಕೇಂದ್ರ ಸಚಿವರು ಮತ್ತು ಕರ್ನಾಟಕದ ಮಾಜಿ ಸಿಎಂ 
ಕುಮಾರಸ್ವಾಮಿ ಅವರನ್ನು 'ಕಾಲಿಯಾ ಕುಮಾರಸ್ವಾಮಿ' ಎಂದು ಕರೆಯುವುದನ್ನು ನಾನು ಬಲವಾಗಿ ಖಂಡಿಸುತ್ತೇನೆ" ಎಂದು ರಿಜಿಜು ಹೇಳಿದ್ದಾರೆ.

"ಇದು ಜನಾಂಗೀಯ ಹೇಳಿಕೆಯಾಗಿದೆ, ರಾಹುಲ್ ಗಾಂಧಿಯವರ ಸಲಹೆಗಾರರು ಕೂಡಾ ದಕ್ಷಿಣ ಭಾರತೀಯರನ್ನು ಆಫ್ರಿಕನ್ನರರಂತೆ, ಈಶಾನ್ಯ ಭಾರತೀಯರ ಚೀನಾದವರಂತೆ, ಉತ್ತರ ಭಾರತೀಯರನ್ನು ಅರಬ್ಬಿನವರಂತೆ  ಕಾಣುತ್ತಾರೆ ಎಂದು ಹೇಳಿದ್ದರು" ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ರಾಜಕೀಯವಾಗಿ ಬೆಳೆಸಿದ ದೇವೇಗೌಡ್ರ ಕುಟುಂಬವನ್ನೇ ಖರೀದಿಸುತ್ತೇನೆ ಎನ್ನುವ ಜಮೀರ್‌ ದರ್ಪ ಹೆಚ್ಚು ದಿನ ಉಳಿಯಲ್ಲ