Publish Date: Mon, 11 Nov 2024 (17:23 IST)
Updated Date: Mon, 11 Nov 2024 (17:33 IST)
ಬೆಂಗಳೂರು: ನಿನ್ನನ್ನು ರಾಜಕೀಯವಾಗಿ ಬೆಳೆಸಿದ್ದ ದೇವೇಗೌಡರ ಕುಟುಂಬವನ್ನೇ ಖರೀದಿ ಮಾಡುತ್ತೇನೆ ಎನ್ನುವ ಜಮೀರ್ ಅಹ್ಮದ್ ಅವರ ಅಧಿಕಾರ ಮತ್ತು ದುಡ್ಡಿನ ದರ್ಪ ಹೆಚ್ಚು ದಿನ ಉಳಿಯಲ್ಲ.. ನಿನ್ನ ಸೊಕ್ಕಿನ ಮಾತಿಗೆ, ಕಪ್ಪು ವರ್ಣದ ಬಗ್ಗೆ ನಿನಗಿರುವ ಹೊಲಸು ಮನಸ್ಥಿತಿಗೆ ರಾಜ್ಯದ ಜನರು ತಕ್ಕ ಉತ್ತರ ನೀಡುತ್ತಾರೆ ಎಂದು ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.
ಎನ್‌ಡಿಎ ಅಭ್ಯರ್ಥಿ ಸಿಎಸ್ ಯೋಗೇಶ್ವರ್ ಪರ ಪ್ರಚಾರ ಮಾಡುವ ವೇಳೆ ಎಚ್‌ಡಿ ಕುಮಾರಸ್ವಾಮಿ ಅವರ ವಿರುದ್ಧ ನಾಲಿಗೆ ಹರಿಬಿಟ್ಟ ಸಚಿವ ಜಮೀರ್ ಅಹ್ಮದ್ ವಿರುದ್ಧ ಜೆಡಿಎಸ್, ಬಿಜೆಪಿ ನಾಯಕರ ಆಕ್ರೋಶ ಹೊರಹಾಕುತ್ತಿದ್ದಾರೆ.
ಕನ್ನಡಿಗರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರ ಬಣ್ಣ ಯಾವುದು ?
ಹೆಚ್.ಸಿ. ಮಹದೇವಪ್ಪ ಅವರ ಬಣ್ಣ ಯಾವುದು ?
ಸತೀಶ್ ಜಾರಕಿಹೊಳಿ ಅವರ ಬಣ್ಣ ಯಾವುದು ?
ಪ್ರಿಯಾಂಕ್ ಖರ್ಗೆ ಅವರ ಬಣ್ಣ ಯಾವುದು ?
ಕೆ.ಹೆಚ್. ಮುನಿಯಪ್ಪ ಅವರ ಬಣ್ಣ ಯಾವುದು ?
ಕೆ.ಜೆ. ಜಾರ್ಜ್ ಅವರ ಬಣ್ಣ ಯಾವುದು ?
ಡಿ.ಕೆ. ಸುರೇಶ್ ಅವರ ಬಣ್ಣ ಯಾವುದು ?
ರಹೀಮ್ ಖಾನ್ ಅವರ ಬಣ್ಣ ಯಾವುದು ?
ಮನುಷ್ಯರ ಚರ್ಮ ಕಪ್ಪಾದರೇನು, ಬಿಳಿಯಾದರೇನು ? ಇಷ್ಟೊಂದು ಕೀಳು ಮನಸ್ಥಿತಿಯ ವ್ಯಕ್ತಿ ಜಮೀರ್ ಅಹ್ಮದ್ ಅವರನ್ನು ಈ ಕೂಡಲೇ ಸಿದ್ದರಾಮಯ್ಯ ಸಂಪುಟದಿಂದ ವಜಾಮಾಡಿ ಎಂದು ಒತ್ತಾಯಿಸಿದೆ..