Select Your Language

Notifications

webdunia
webdunia
webdunia
webdunia

ಬುಲ್ಡೋಜರ್ ಶಿಕ್ಷೆ ಬಗ್ಗೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು: ಡೀಟೈಲ್ಸ್ ಇಲ್ಲಿದೆ

Supreme Court

Krishnaveni K

ನವದೆಹಲಿ , ಬುಧವಾರ, 13 ನವೆಂಬರ್ 2024 (12:14 IST)
ನವದೆಹಲಿ: ಬುಲ್ಡೋಜರ್ ಹರಿಸಿ ಕಟ್ಟಡ ಧ್ವಂಸಗೊಳಿಸುವ ಕಾರ್ಯಾಚರಣೆ ಬಗ್ಗೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಆರೋಪಿಯಾಗಿರುವ ಅಥವಾ ತಪ್ಪಿತಸ್ಥರಾದವರ ಮನೆ ಅಥವಾ ಸಂಬಂಧಪಟ್ಟ ಕಟ್ಟಡವನ್ನು ಅಧಿಕಾರಿಗಳೇ ಬುಲ್ಡೋಜರ್ ಹರಿಸಿ ನೆಲಸಮಗೊಳಿಸಿ ಶಾಸ್ತಿ ಮಾಡಲಾಗುತ್ತಿತ್ತು. ಆದರೆ ಈ ಬಗ್ಗೆ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಇದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ.

ಯಾವುದೇ ಕಟ್ಟಡ ಅಥವಾ ಮನೆ ಧ್ವಂಸಗೊಳಿಸುವ ಮೊದಲು ಮಾಲಿಕರಿಗೆ ಮುಂಚಿತವಾಗಿ 15 ದಿನಗಳ ನೋಟಿಸ್ ನೀಡಬೇಕು. ಆರೋಪಿಯಾಗಿರುವುದು ಅಥವಾ ತಪ್ಪಿತಸ್ಥರಾಗಿರುವುದು ಅವರಿಗೆ ಸಂಬಂಧಪಟ್ಟ ಕಟ್ಟಡಗಳನ್ನು ಧ್ವಂಸಗೊಳಿಸಲು ನೀಡುವ ಹಕ್ಕಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಅಪರಾಧಕ್ಕೆ ಶಿಕ್ಷೆ ನೀಡಲು ನ್ಯಾಯಾಲವಿದೆ. ಆದರೆ ಅವರಿಗೆ ಸಂಬಂಧಿಸಿದ ಕಟ್ಟಡಗಳನ್ನು ನಿರಂಕುಶವಾಗಿ ಅಧಿಕಾರಿಗಳು ಧ್ವಂಸ ಮಾಡಿದರೆ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿದೆ. ಆರೋಪಿ ಎಂಬ ಮಾತ್ರಕ್ಕೆ ಕಟ್ಟಡ ಕೆಡವಿದರೆ ಅಪರಾಧವಾಗುತ್ತದೆ. ಮನೆ ಅಥವಾ ಕಟ್ಟಡ ಕೆಡವಿದರೆ ಪರಿಹಾರ ನೀಡಬೇಕು. ಒಬ್ಬ ವ್ಯಕ್ತಿಯ ತಪ್ಪಿಗೆ ಇಡೀ ಕುಟುಂಬಕ್ಕೆ ಶಿಕ್ಷೆ ಕೊಡುವುದು ನ್ಯಾಯಸಮ್ಮತವಲ್ಲ. ನಿಯಮಬಾಹಿರವಾಗಿದ್ದರೆ ನೋಟಿಸ್ ನೀಡಬೇಕು. ಅಂಚೆ ಮೂಲಕ ನೋಟಿಸ್ ತಲುಪಬೇಕು. ನೋಟಿಸ್ ನೀಡಿ 15 ದಿನ ಕಾದ ಬಳಿಕ ಕ್ರಮ ಕೈಗೊಳ್ಳಬೇಕು. ನೋಟಿಸ್ ನೀಡಿದ್ದರೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಬೇಕು. ಅಕ್ರಮ ಕಟ್ಟಡವಾಗಿದ್ದರೆ ತೆರವುಗೊಳಿಸಲು ಆರೋಪಿಗಳಿಗೆ ಸಮಯ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಯನಾಡು ಉಪಚುನಾವಣೆ ಲಾಭಕ್ಕಾಗಿ ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿತಾ ಕರ್ನಾಟಕ