Select Your Language

Notifications

webdunia
webdunia
webdunia
webdunia

ಮದರಸಾ ಶಿಕ್ಷಣ ಸರಿಯಿಲ್ಲ, ಈ ಶಾಲೆಗಳಿಗೆ ಸರ್ಕಾರ ಅನುದಾನ ನಿಲ್ಲಿಸಬೇಕು ಎಂದು ಪತ್ರ ಬರೆದ ಮಕ್ಕಳ ಹಕ್ಕುಗಳ ಆಯೋಗ

Court

Krishnaveni K

ನವದೆಹಲಿ , ಸೋಮವಾರ, 14 ಅಕ್ಟೋಬರ್ 2024 (12:25 IST)
ನವದೆಹಲಿ: ಮದರಸಾ ಶಿಕ್ಷಣ ಸರಿಯಿಲ್ಲ, ಇಂತಹ ಶಾಲೆಗಳಿಗೆ ಸರ್ಕಾರ ಅನುದಾನ ನೀಡುವುದನ್ನು ಸರ್ಕಾರಗಳು ನಿಲ್ಲಿಸಬೇಕು ಎಂದು ರಾಷ್ಟ್ರೀಯ ಮಕ್ಕಳ ಹಕ್ಕು ಸಂರಕ್ಷಣಾ ಆಯೋಗ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದೆ.

ಮದರಸಾ ಶಿಕ್ಷಣ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ಸರಿಯಾದ ಸಂಸ್ಥೆಗಳಲ್ಲ. ಇಲ್ಲಿ ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗುತ್ತಿಲ್ಲ. ಇಂತಹ ಶಾಲೆಗಳನ್ನು ಸರ್ಕಾರಗಳು ಪ್ರೋತ್ಸಾಹಿಸಬಾರದು. ಕೂಡಲೇ ಇವುಗಳಿಗೆ ನೀಡುವ ಅನುದಾನಗಳನ್ನು ನಿಲ್ಲಿಸಬೇಕು ಎಂದು ಮಕ್ಕಳ ಹಕ್ಕುಗಳ ಆಯೋಗ ಎಲ್ಲಾ ರಾಜ್ಯಗಳ ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆದಿದೆ.

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್ ಖರ್ಗೆ, ನಾವಿನ್ನೂ ಮಕ್ಕಳ ಹಕ್ಕುಗಳ ಆಯೋಗದ ಪತ್ರದಲ್ಲಿ ಏನಿದೆ ಎಂದು ಓದಿಲ್ಲ ಓದಿದ  ಬಳಿಕವೇ ಈ ಬಗ್ಗೆ ಪ್ರತಿಕ್ರಿಯಿಸಬಹುದಾಗಿದೆ. ಆಯೋಗ ನಿಜವಾಗಿ ಮದರಸಾಗಳನ್ನು ಬಂದ್ ಮಾಡುವ ಸಲಹೆ ನೀಡುವ ಬದಲು ಪರ್ಯಾಯ ಮಾರ್ಗಗಳ ಬಗ್ಗೆ ಸಲಹೆ ನೀಡಬಹುದಿತ್ತು. ವಿಪರ್ಯಾಸವೆಂದರೆ ಇತ್ತೀಚೆಗಷ್ಟೇ ಮಹಾರಾಷ್ಟ್ರ ಸರ್ಕಾರ ತನ್ನ ರಾಜ್ಯದ ಮದರಸಾ ಶಿಕ್ಷಕರ ವೇತನವನ್ನು ಮೂರು ಪಟ್ಟು ಹೆಚ್ಚಿಸಿತ್ತು. ಇದರ ಬೆನ್ನಲ್ಲೇ ಆಯೋಗ ಇಂತಹದ್ದೊಂದು ಸಲಹೆ ನೀಡಿರುವುದು ವಿಶೇಷ ಎಂದಿದ್ದಾರೆ.

ಬಿಜೆಪಿ ಮಿತ್ರ ಪಕ್ಷವಾಗಿರುವ ಜನ ಲೋಕಶಕ್ತಿ ಪಕ್ಷದ ನಾಯಕ ಎಕೆ ಬಾಜಪೇಯಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಯಾವುದೇ ಮದರಸಾಗಳು ಕಾನೂನುಬಾಹಿರವಾಗಿ ನಡೆಸಲಾಗುತ್ತಿದೆ ಎಂದಾದರೆ ಬಂದ್ ಮಾಡಲು ಕ್ರಮ ಕೈಗೊಳ್ಳಬಹುದು. ಇಲ್ಲದೇ ಹೋದರೆ ವಿನಾಕಾರಣ ಬಂದ್ ಮಾಡುವುದರಲ್ಲಿ ಅರ್ಥವಿಲ್ಲ ಎಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊತ್ತಿ ಉರಿಯುತ್ತಿದ್ದ ಚಾಲಕರಹಿತ ಕಾರು ರಸ್ತೆಯಲ್ಲಿ ಓಡಾಡುವುದು ನೋಡಿ ಓಡಿದ ಜನ: ವೈರಲ್ ವಿಡಿಯೋ